ಉಡುಪಿ ಜಿಲ್ಲಾ ಪಂಚಾಯತ್-ಶಾಲಾ ಶಿಕ್ಷಣ ಇಲಾಖೆ ಉಡುಪಿ – ಕ್ಷೇತ್ರ ಶಿಕ್ಷಾಧಿಕಾರಿಯವರ ಕಚೇರಿ – ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆ ಒಳಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಉಡುಪಿ ವಲಯ ಮಟ್ಟದ ಪ್ರಾರ್ಥಮಿಕ ಹಾಗು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024-25, ದಿನಾಂಕ 22.11.2024ನೇ ಶುಕ್ರವಾರದಂದು ನಡೆಯಿತು ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ನಾಲ್ಕುವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಎರಡು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಶಾಲೆಗೆ ಮೆರುಗು ತಂದಿದ್ದಾರೆ..ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ , ಶಿಕ್ಷಕರು ಹಾಗೂ ಪೋಷಕರು ಶ್ಲಾಘಿಸಿ ಅಭಿನಂದಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ

