×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಂದಾರ್ತಿ : 72ನೇ ಸಹಕಾರಿ ಸಪ್ತಾಹ ಉದ್ಘಾಟಿಸಿದ ಜಯಕರ ಶೆಟ್ಟಿ ಇಂದ್ರಾಳಿ

ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿ ಸಾದ್ಯ ಜನರ ವಿಶ್ವಾಸ ಹಾಗೂ ನಂಬಿಕೆಯಿಂದ ಸಹಕಾರಿ ಕ್ಷೇತ್ರ ಬಲಗೊಳ್ಳುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅವರು ಶುಕ್ರವಾರ ಮಂದಾರ್ತಿ ಶ್ರೀ ದುರ್ಗಾ ಸಹಕಾರ ಸೌಧದ ಶ್ರೀ ಚಾಮುಂಡೇಶ್ವರಿ ಸಭಾಂಗಣದ ಲ್ಲಿ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಮಂದಾರ್ತಿ ಸೇವಾ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಜನಜೀವನಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ, ಸವಲತ್ತುಗಳು ಸಹಕಾರಿ ಸಂಘಗಳಿಂದ ದೊರೆಯುವ ನಿರೀಕ್ಷೆಯಿದೆ.ಎಂದರು

ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ| ಗಣನಾಥ ಶೆಟ್ಟಿ ಎಕ್ಕಾರ್ ಅವರು ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ವಿಷಯದ ಕುರಿತು ಮಾತನಾಡಿದರು.ಆತ್ಮನಿರ್ಭರ ಎಂದರೆ ಸ್ವಾವಲಂಬಿಗಳಾಗುವುದು ತಿಳಿಸಿದರು

ಈ ಸಂದರ್ಭದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025 ಅಧ್ಯಕ್ಷರುಗಂಗಾಧರ್ ಶೆಟ್ಟಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು

ಅತಿಥಿಗಳಾಗಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಎಚ್. ಧನಂಜಯ ಶೆಟ್ಟಿ ಸಹಕಾರ ಸಂಘಗಳ ಉಪ ನಿಬಂಧಕಿ ಕೆ.ಆರ್.ಲಾವಣ್ಯ, ಸಹಾಯಕ ನಿಬಂಧಕ ಸುರ್ಧೀಕುಮಾರ್, ಸಹಕಾರಿ ಪ್ರಮುಖರಾದ ಶೇಡಿಕೊಡ್ಲುವಿಟ್ಟಲ್ ಶೆಟ್ಟಿ ಸುಧೀರ್‌ಕುಮಾರ್ ಪಡುಬಿದ್ರಿ. ಮೈರ್ಮಾಡಿ ಅಶೋಕ್ ಕುಮಾರ್‌ಶೆಟ್ಟಿ ಹರೀಶ್ ಕಿಣಿ, ಸುರೇಶ್, ಅಶೋಕ್ ಕುಮಾರ್‌ಬಲ್ಲಾಳ್, ಕರುಣಾಕರ ಶೆಟ್ಟಿ ಅನಿಲ್ ಕುಮಾರ್, ಮಂದಾರ್ತಿ ಸಹಕಾರಿ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ನಿರ್ದೇಶಕರಾದ ಕೆ. ಶಂಭುಶಂಕರ ರಾವ್, ಗಣೇಶ್ ಶೆಟ್ಟಿ ಪ್ರಥ್ವಿರಾಜ್ ಶೆಟ್ಟಿ ಜಲಂಧರ ಶೆಟ್ಟಿ ಗುರುಪ್ರಸಾದ್, ಪ್ರವೀಣ್ ಕುಮಾರ್‌ಶೆಟ್ಟಿ ದಿನೇಶ ಮರಕಾಲ, ಚಂದ್ರಶೇಖರ, ಪ್ರೇಮ, ಗುಲಾಬಿ, ರಾಧ, ಬಸವ ನಾಯ್ಕ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್, ಮಂದಾರ್ತಿ ಸಂಘದ ಸಿಇಒ ರಾಮಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಂದಾರ್ತಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಮಂದಾರ್ತಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಸ್ವಾಗತಿಸಿ, ಶ್ರೀಧರ ಪಿ.ಎಸ್. ನಿರೂಪಿಸಿದರು

Leave a Reply

Your email address will not be published. Required fields are marked *