ಬ್ರಹ್ಮಾವರ ನ.15: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತದ ಆಡಳಿತ ಮಂಡಳಿತ ನೂತನ ಪದಾಧಿಕಾರಿಗಳ ಪದಪ್ರದಾನ ನ.15ರಂದು ಬ್ರಹ್ಮಾವರ ರೋಯಲ್ ಇನ್ ಹೊಟೇಲ್‌ನಲ್ಲಿ ನಡೆಯಿತು. ಕ್ಯಾಂಪ್ಲೋ ಅಧ್ಯಕ್ಷ ಕಿಶೋರ್‌ಕುಮಾರ್‌ಕೊಡ್ಡಿ ಪದಪ್ರದಾನ ನೆರವೇರಿಸಿ ಇವತ್ತು ಚಿಂತನೆ ಮಾಡಬೇಕಾಗಿದೆ ಹಿರಿಯರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಯಲ್ಲಿ ರಾಜಕೀಯ ಬರಬಾರದು ರಾಜಕೀಯ ಇಲ್ಲದೆ ಸಹಕಾರಿ ಇಲ್ಲ ಉಡುಪಿ ಮತ್ತು ಮಂಗಳೂರು ಸಹಕಾರಿ ಕ್ಷೇತ್ರ ದೇಶಕ್ಕೆಮಾದರಿ ಯಾಗಿದೆ ಗ್ರಾಹಕರೊಂದಿಗೆ ಪ್ರೀತಿ ವಿಶ್ವಾಸದ ಸೇವೆ ಸಹ ಕಾರಿ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ . ಎಂದು ತಿಳಿಸಿದರು
ರಾಜ್ಯ ಸೌಹಾರ್ದ ಸಹಕಾರಿ ನಿರ್ದೇ ಶಕ ಎಸ್. ಕೆ. ಮಂಜುನಾಥ ಮಾತನಾಡಿ, ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು ಸಿಬಂದಿ ಇದಕ್ಕೆ ಹೊಂದಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು


ಸೌಹಾರ್ದ ಸಹಕಾರಿ ಒಕ್ಕೂಟದ ನೂತನ ಅಧ್ಯಕ್ಷರಾಗಿಪಿ. ಜಗನ್ನಾಥ್ ಶೆಟ್ಟಿ ಉಪಾಧ್ಯಕ್ಷರಾಗಿ ಅಶೋಕ್ ಪ್ರಭು ಸಾಹೇಬರಕಟ್ಟೆ ನಿರ್ದೇಶಕರಾಗಿ ಮಂಜುನಾಥ ಎಸ್.ಕೆ., ಬಿ.ಮಧುಸೂದನ್ ನಾಯಕ್, ಎಂ. ವಿನಾಯಕ ರಾವ್, ಸುಧಾಕರ ಕೆ.ಮೂಳೂರು, ಸುಧೀಶ್ ನಾಯಕ್, ನೇಮಿರಾಜ್ ಅರಿಗ, ಕೆ.ನಾಗರಾಜ್, ಸುಬ್ರಹ್ಮಣ್ಯ ಪಡುಕೋಣೆ, ನವೀನ್ ಚಂದ್ರ ಎಸ್. ಸುವರ್ಣ, ಭೀಮೇಶ್ ಕುಮಾರ್‌ಎಸ್.ಜಿ., ಪ್ರಮೋದ್ ಕುಮಾರ್‌ಶೆಟ್ಟಿ ರಾಮ್ ವಿ.ಕುಂದರ್, ಭಾಸ್ಕರ್‌ಬಿ. ಅಧಿಕಾರ ಸ್ವೀಕರಿಸಿದರು.
ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಹಕಾರಿಗಳಾದ ರಾಘವೇಂದ್ರ ಕರ್ಕೇರ ಕೋಡಿ, ಗೋವಿಂದ ಭಂಡಾರಿ, ಸಹಕಾರಿ ರತ್ನ ರಾಮಚಂದ್ರ ಕುಂದರ್‌ಅವರನ್ನು ಗೌರವಿಸಲಾಯಿತು. ಅಶೋಕ್ ಪ್ರಭು ಸ್ವಾಗತಿಸಿ, ಅರುಣ್ ಕುಮಾರ್‌ನಿರೂಪಿಸಿ, ಸಿಇಒ ಲೋಹಿತ್ ಜಿ. ಸಾಲಿಯಾನ್ ವಂದಿಸಿದರು. ಸೌಹಾರ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಜಯ ಡಿ.ಎಸ್. ಸಹಕರಿಸಿದರು.

