
ಉಡುಪಿ : ಹಿರಿಯ ಛಾಯಾಗ್ರಾಹಕ ಕಲ್ಮಾಡಿ ನಿವಾಸಿ ಗೋವಿಂದ ಕಲ್ಮಾಡಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಿಂದ ಕಲ್ಮಾಡಿ (58) ಅವರು ಅವಿವಾಹಿತರಾಗಿದ್ದು ಸುಮಾರು 35 ವರ್ಷಗಳಿಂದ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದರು. ಮೃತರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.ಅವರ ಅಂತ್ಯಕ್ರಿಯೆ ಕಲ್ಯಾಣಪುರ ತಂಗಿ ಮನೆಯಲ್ಲಿ ನಡೆಯಲಿದೆ

