
ಇತ್ತೀಚೆಗೆ ನಿಧನರಾಗಿರುವ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರಿಗೆ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು ನಾಗರಿಕ ನುಡಿ ನಮನ, ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಿದೆ. ಜನವರಿ 15 ಆದಿತ್ಯವಾರದಂದು ಸಂಜೆ 3:30 ಕ್ಕೆ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಾರಾ ಅಬೂಬಕ್ಕರ್ ಒಡನಾಡಿಗಳು, ಮಂಗಳೂರಿನ ನಾಗರಿಕ ಸಮಾಜದ ಪ್ರತಿನಿಧಿಗಳು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಸಮಾನ ಮನಸ್ಕ ಸಂಘಟನೆಗಳ ಪರವಾಗಿ ವಾಸುದೇವ ಉಚ್ಚಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

