×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಪುರಸಭಾ ಸದಸ್ಯರು, ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ

ಕಾಪು ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಇಂದು ದಿನಾಂಕ 02-06-2023 ರಂದು ಕಾಪು ಪುರಸಭೆಯ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪುರಸಭಾ ಸದಸ್ಯರು ಹಾಗೂ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರು ಮಾತನಾಡಿ ಮುಂಗಾರು ಆರಂಭಗೊಳ್ಳಲಿದ್ದು ಮುಂಜಾಗ್ರತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿ ಪುರಸಭಾ ಇಲಾಖಾಧಿಕಾರಿಗಳು ಕ್ಲಪ್ತ ಸಮಯದಲ್ಲಿ ಕಚೇರಿಗೆ ಆಗಮಿಸಿ ಶೀಘ್ರವಾಗಿ ಕಡತವಿಲೆವಾರಿಗೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಗಳಾದ ಸಂತೋಷ್, ನಗರ ಯೋಜಕರಾದ ಅಭಿಲಾಶ್ ಹಾಗೂ ಪುರಸಭೆಯ ಸದಸ್ಯರು, ಪುರಸಭೆಯ ಅಭಿಯಂತರರು, ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *