ರಾಜ್ಯದ ವಿವಿಧೆಡೆ ರವಿವಾರ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನೆರವೇರಿದೆ. ವಾದ್ಯ ಮೇಳ, ಡೊಳ್ಳು ಕುಣಿತ ಸೇರಿದಂತೆ ಜಾಣಪದ ನೃತ್ಯಗಳೊಂದಿಗೆ ವಿನಾಯಕನಿಗೆ ಬೀಳ್ಕೊಡುಗೆ ನೀಡಲಾಯಿತು. ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ನಡೆದ ಪ್ರತಿಷ್ಠಾಪಿಸಿದ 20ನೇ ವರ್ಷದ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ನಗರದಲ್ಲಿ ರವಿವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ರಸ್ತೆಗಳಲ್ಲಿ ಯುವಕರು, ಹಿರಿಯರು ಕೇಸರಿ ಬಾವುಟ ಹಿಡಿದು ಮತ್ತು ಧ್ವನಿ ವರ್ಧಕ ಹಾಡಿಗೆ ಕುಣಿದು ಕುಪ್ಪಳಿಸಿದರು. ಆದ್ದೂರಿಯಾಗಿ ಗಣೇಶನಿಗೆ ವಿದಾಯ ಹೇಳಲಾಯಿತು

