ಕಟಪಾಡಿ : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯುತ್ತಿದ್ದ ಸಂಸ್ಥಾನದ ಸರಸ್ವತೀ ಪೀಠದ ಪೀಠಾಧಿಪತಿ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಭಾನುವಾರ ಜರುಗಿತು. ವಿಶ್ವಕರ್ಮ ಯಜ್ಞ ಪೂರ್ಣಾಹುತಿ ಬಳಿಕ ಪಡುಕುತ್ಯಾರು ಮಠದ ಸಮೀಪದಲ್ಲಿ ಗುರುಗಳು ಸಿಮೋಲ್ಲಂಘನ ನೆರವೇರಿಸಿ, ದಿಗ್ವಿಜಯ ಮೆರವಣಿಗೆ ಮೂಲಕ ಕಟಪಾಡಿ ವೇಣುಗಿರಿ ಕಾಳಿಕಾಂಬಾ ವಿಶ್ವಕಮೇಶ್ವರ ದೇವಸ್ಥಾನದ ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮಿಗಳ ವೃಂದಾವನ ಹಾಗೂ ದೇಗುಲ ಸಂದರ್ಶಿಸಿ ಪೂಜಾರಾಧನೆ ನೆರವೇರಿಸಿದರು. ಕಟಪಾಡಿ ಆನೆಗುಂದಿ ಮಹಾಸಂಸ್ಥಾನದಲ್ಲಿ ಪೂಜೆ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರದಲ್ಲಿ ಪೂಜೆ ನೆರವೇರಿಸಿ, ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠಕ್ಕೆ ಮೆರವಣಿಗೆಯಲ್ಲಿ ಆಗಮಿಸಿ ಗೋಪೂಜೆ ನೆರವೇರಿಸಿದರು.

ಪಡುಕುತ್ಯಾರು ಮಠದ ಸಮೀಪ ಶ್ರೀಗಳು ಸಿಮೋಲ್ಲಂಘನ ನೆರವೇರಿಸಿದರು. ಬಳಿಕ ಶ್ರೀಗುರುಪಾದಪೂಜೆ ಜರುಗಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಆಚಾರ್ಯ ಚಾತುರ್ಮಾಸ್ಯ ವ್ರತ ನಿರ್ವಹಣಾ ಅಧ್ಯಕ್ಷ ಪಿ.ಶ್ರೀಧರ ವಡೇರಹೋಬಳಿ, ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ, ಪ್ರಮುಖರಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆದುಂಗಡಿ, ದಿನೇಶ್ ವೈ. ಆಚಾರ್ಯ ಪಡುಬಿದ್ರಿ, ಚಂದ್ರಯ್ಯ ಆಚಾರ್ಯ ಕಳಿ, ಪ್ರಭಾಕರ ಆಚಾರ್ಯ ಕೋಟೆಕಾರು, ನಾಗರಾಜ ಆಚಾರ್ಯ ಕಾಡಬೆಟ್ಟು ಗಣೇಶ್ ಆಚಾರ್ಯ ಕಾಪು, ಜನಾರ್ದನ ಆಚಾರ್ಯ ಆರಿಕ್ಕಾಡಿ, ಆಚಾರ್ಯ ಬಂಗ್ರಮಂಜೇಶ್ವರ, ಮೋಹನ್ ಕುಮಾರ್ ಬಳ್ಳೂರು, ಬೆಳುವಾಯಿ ಸುಂದರ ಆಚಾರ್ಯ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಧಾಕರ ಆಚಾರ್ಯ ತ್ರಾಸಿ, ಸುರೇಶ್ ಆಚಾರ್ಯ ನಿಟ್ಟೆ ಸಂಧ್ಯಾ ಲಕ್ಷ್ಮಣ ಬಿ.ಎಂ.ಯದುನಂದನ ಆಚಾರ್ಯ ಉಡುಪಿ, ಜಗದೀಶ್ ಆಚಾರ್ಯ ಪಡುಪಣಂಬೂರು ಹಾಗೂ ಮಠದ ಪ್ರಸ್ತುತ ಮತ್ತು ಪೂರ್ವ ವಿದ್ಯಾರ್ಥಿಗಳು, ಮಠದ ಭಕ್ತಾದಿಗಳು ಉಪಸ್ಥಿತರಿದ್ದರು

