×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು: ‘ಇನಾಸನ್ ನೂತನ ಆಡಿಟೋರಿಯಂ’ ಲೋಕಾರ್ಪಣೆ

ಕಾಪು, ಸೆ. 7: ಕೊಪ್ಪಲಂಗಡಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ವಸುಸಜ್ಜಿತ ಅತ್ಯಾಧುನಿಕ ಸೌಲಭ್ಯ ಗಳಿಂದ ಕೂಡಿರುವ ‘ಇನಾಸನ್ ಆಡಿಟೋರಿಯಂ’ ಅನ್ನು ಸೆ. 7ರಂದು ಲೋಕಾರ್ಪಣೆಗೊಳಿಸಲಾಯಿತು ಆಡಿಟೋರಿಯಂ ಅನ್ನು ಉದ್ಘಾಟಿಸಿದ ಅನಿವಾಸಿ ಭಾರತೀಯ ಉದ್ಯಮಿ ಮಹಮ್ಮದ್ ಅಸ್ಲಂ ಖಾಝಿ ಮಾತನಾಡಿ, .ಕಾಪು ನಲ್ಲಿ ಉತ್ತಮ ಸೌಕರ್ಯಗಳನ್ನು ಒಳಗೊಂಡ ಹಾಲ್ ನಿರ್ಮಿಸುವ ಮೂಲಕ ಸದುಪಯೋಗ ಮಾಡಿ ಕೊಳ್ಳಬೇಕು ಕರಾವಳಿ ಜನತೆಯ ಆವಶ್ಯಕತೆ, ಅಗತ್ಯತೆಗೆ ಅನುಗುಣವಾಗಿ ಇನಾಸನ್ ಆಡಿಟೋರಿಯಂ ನಿರ್ಮಾಣಗೊಂಡಿದೆ. ಇಲ್ಲಿ ಸರ್ವ ಧರ್ಮಿಯರ ಕಾರ್ಯಕ್ರಮ ಗಳು ನಡೆಯುವಂತಾಗಲಿ ಎಂದರು.

ಉದ್ಯಾವರ ಹಲೀಮಾ ಸಾಬ್ಬು ಆಡಿಟೋರಿಯಂನ ಮಾಲಕ ಅಬ್ದುಲ್ ಜಲೀಲ್ , ಸಾಹೇಬ್ ಮಾತನಾಡಿ . ನಾವೆಲ್ಲರೂ ಎಲ್ಲರೂ ಜತೆಗೂಡಿ ಇವರೊಂದಿಗೆ ಕೈಜೋಡಿಸೋಣ ಎಂದರು.

ಇನಾಸನ್ ನೂತನ ಆಡಿಟೋರಿಯಂ ವಿಶೇಷ ಸೌಲಭ್ಯಗಳು 5,000ಕ್ಕೂ ಮಿಕ್ಕಿದ ಜನರಿಗೆ ಬಳಕೆಯಾಗುವ ಸಭಾಂಗಣ 30,000 ಚದರ ಅಡಿ ವಿಸ್ತೀರ್ಣದ ವಿಶಾಲವಾದ ಡೈನಿಂಗ್ ಹಾಲ್ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಭಾಂಗಣ ವ್ಯವಸ್ಥೆ ಈ ಸಣ್ಣ ಕಾರ್ಯಕ್ರಮಗಳಿಗೂ ಸೂಕ್ತವಾಗುವ ಮಿನಿಹಾಲ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ 4,000 ಚದರ ಅಡಿ ವಿಸ್ತೀರ್ಣದ ಭವ್ಯವಾದ ಪ್ರವೇಶ ದ್ವಾರ 250ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ॥ ಅತ್ಯಾಧುನಿಕವಾದ ಲಿಫ್ಟ್‌ ವ್ಯವಸ್ಥೆ ಎಲ್ಲ ಧರ್ಮ, ಜಾತಿ ಮತ್ತು ಪಂಗಡಗಳ ಜನರ ಅವಶ್ಯಕತೆಗೆ ತಕ್ಕಂತೆ ವ್ಯವಸ್ಥೆಗಳ ಜೋಡಣೆ ಭದ್ರತೆಗೆ ವಿಶೇಷ ಆದ್ಯತೆ ಮುಂದಿನ ಯೋಜನೆಗಳು ವಿಶಾಲವಾದ ಸ್ವಿಮ್ಮಿಂಗ್ ಪೂಲ್ ಹವಾನಿಯಂತ್ರಿತ ವಸತಿ ವ್ಯವಸ್ಥೆ ” ರಾತ್ರಿ ಕಾರ್ಯಕ್ರಮಕ್ಕೆ ಹೊರಾಂಗಣ ಸಭಾಭವನ ನಿರ್ಮಾಣಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಹಾರೈಸಿದರು .ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಮಾತನಾಡಿ, ಶುಭಹಾರೈಸಿದರು. ಇನಾಸನ್ ಆಡಿಟೋರಿಯಂನ ಅಧ್ಯಕ್ಷ ಮಹಮ್ಮದ್ ಸಾಧಿಕ್ ದೀನಾರ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಡಾಕ್ಟರ್ ಶೇಕ್ ವಾಹಿದ್ ದಾವುದ್ಎಸ್ ಡಿಪಿಐ ಜಿಲ್ಲಾಧ್ಯಕ್ಷ ಆಸಿಫ್ ಕೊಟೇಶ್ವರ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಎಂಎಫ್ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೌಲಾ ಸಾಹೇಬ್, ಗಣ್ಯರಾದ ಅಬ್ದುಲ್ ರೆಹಮಾನ್, ಲುತ್ಸುಲ್ ರೆಹಮಾನ್, ಶಭೀ ಅಹಮದ್ ಖಾಜಿ, ಶಾಬು ಸಾಹೇಬ್, ಅಬ್ದುಲ್ ಕೈಯ್ಯುಂ ಸಾಹೇಬ್, ಮಕ್ಖುಲ್ ಅಹಮದ್, ಜಾಕಿರ್ ಮೊಹಿದಿನ್, ಮಕರ ಕನ್‌ಸ್ಟ್ರಕ್ಷನ್‌ ಸುಧಾಕರ ಶೆಟ್ಟಿ ಮಲ್ಲಾರು, ಆರ್ಕಿಟೆಕ್ಟ್‌ಗಳಾದ ಆದಿಲ್ ಕಾಪು, ಸುಲೇಮಾನ್ ಕಾಪು ಮೊದಲಾದವರು ಉಪಸ್ಥಿತರಿದ್ದರು. ನಜೀ‌ರ್ ಅಹಮದ್‌ ಸ್ವಾಗತಿಸಿದರು. ಮಹಮ್ಮದ್ ಷರೀಪ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *