
ಮಣಿಪಾಲ:ಮನೆಯೊಳಗೆ ನುಗ್ಗಿ, ಕಳ್ಳತನ ಮಾಡಿದ ಪುಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಡುಪಿಯ ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಮನೆಗೆ ನುಗ್ಗಿ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ 1) ಅಂದಾಜು 20 ಗ್ರಾಂ ಕಿವಿಯ ಯೋಲೆ ಮತ್ತು ಸರ 2) ಅಂದಾಜು 20 ಗ್ರಾಂ ಪೆಂಡೆಂಟ್ ಇರುವ ಚಿನ್ನದ ಸರ 3) ಅಂದಾಜು 4 ಗ್ರಾಂ ಚಿನ್ನದ ಉಂಗುರ 4) ಅಂದಾಜು 8 ಗ್ರಾಂ ಚಿನ್ನದ ಸರ 5) 2 ಗ್ರಾಂ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗ ಬಹುದು. ಈ ಬಗ್ಗೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 37 /2023 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಪ್ರಕರಣದಲ್ಲಿ ಆರೋಪಿತರ ಪತ್ತೆ ಬಗ್ಗೆ ನಿರಂತರವಾಗಿ ಪುಯತ್ನಿಸಿ ದಿನಾಂಕ 02.03.2023 ರಂದು ಆರೋಪಿತರಾದ ವರುಣ ಪ್ರಾಯ 19 ವರ್ಷ 9) ಕಾರ್ತಿಕ ಪೂಜಾರಿ ಪ್ರಾಯ 19 ವರ್ಷ ಪೆರಂಪಳ್ಳಿ ಶೀಂಬಾ ಕ್ರಾಸ್ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡುವಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ಅವರುಗಳಿಂದ ಕಳವು ಮಾಡಿದ 2,40,000/- ರೂ ಚಿನ್ನಾಭರಣಗಳನ್ನು ಮತ್ತು 1 ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ 2 ಪ್ರಕರಣಗಳು ಹಾಗೂ ಮಣಿಪಾಲ ಠಾಣೆಯ 1 ಪ್ರಕರಣ ಸೇರಿ ಒಟ್ಟು 3 ಪುಕರಣದಲ್ಲಿ ಭಾಗಿಯಾಗಿದ್ದು, ಸದರಿ 3 ಪುಕರಣಗಳನ್ನು ಭೇದಿಸಿ ಆರೋಪಿತರುಗಳಿಂದ ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಎಮ್ ಎಚ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪ ಟಿ ಕೆ.ಎಸ್.ಪಿ.ಎಸ್ ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ, ದೇವರಾಜ ಟಿ.ವಿ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ, ನವೀನ್ ನಾಯ್ಕ ಪಿ.ಎಸ್.ಐ ಮಣಿಪಾಲ ಠಾಣೆ, ರುಕ್ಕ ನಾಯ್, ಪಿ ಎಸ್ ಐ ಮಣಿಪಾಲ ಠಾಣೆ ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಗಂಗಪ್ಪ ಎಸ್, ಎ.ಎಸ್.ಐ ನಾಗೇಶ್ ನಾಯಕ್, ಎ.ಎಸ್.ಐ ಶೈಲೇಶ್ ಕುಮಾರ್, ಹೆಚ್ ಸಿ 164 ಪುಸನ್ನ ಸಿ, ಹೆಚ್.ಸಿ. 1094 ಇಮ್ರಾನ್, ಹೆಚ್ ಸಿ 2168 ಸುಕುಮಾರ್ ಶೆಟ್ಟಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

