ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 21 ನೇ ವರ್ಷದ ಚಾತುರ್ಮಾಸ್ಯ ಜುಲೈ 10ರಿಂದ ಆರಂಭಗೊಂಡಿದ್ದು ಸೆಪ್ಟಂಬರ್ 7 ರ ವರೆಗೆ ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ಸಂಪನ್ನಗೊಳ್ಳಲಿದೆ. ಈ ಪರ್ವಕಾಲದಲ್ಲಿ ಜಗದ್ಗುರುಗಳ ಜನ್ಮ ವರ್ಧಂತಿಯು ಜುಲೈ 22ರಂದು ನಡೆಯಲಿದ್ದು, ಬೆಳಿಗ್ಗೆ ಗಣೇಶ ಅಥರ್ವ ಶೀರ್ಷ ಹೋಮ,ಮಹಾಮೃತ್ಯುಂಜಯ ಹೋಮ,ನವಗ್ರಹ ಹೋಮ,ರುದ್ರ ಹೋಮ ,ಧನ್ವಂತರಿ ಹೋಮ,ಸರಸ್ವತೀ ಹೋಮಗಳೊಂದಿಗೆ ಆರಂಭಗೊಳ್ಳಲಿದೆ. ಬಳಿಕ ವರ್ಷದಲ್ಲಿ ಒಂದು ದಿನ ಮಾತ್ರ ನಡೆಯುವ ಜಗದ್ಗುರುಗಳವರ ತುಲಾಭಾರಸೇವೆ ಯು ಶಿಷ್ಯವೃಂದದವರಿಂದ ನಡೆಯಲಿದೆ. ನಂತರ ನಡೆಯುವ ಧರ್ಮ ಸಭೆಯಲ್ಲಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್,ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಮಹಾಸಂಸ್ಥಾನದ ವ್ಯಾಪ್ತಿಯ ಕ್ಷೇತ್ರಗಳ ಧರ್ಮದರ್ಶಿಗಳು, ಆನೆಗುಂದಿ ಪ್ರತಿಷ್ಠಾನ ವಿಶ್ವಸ್ಥ ಮಂಡಳಿ, ಸಹ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ
ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಯ ವಿದ್ವಾನ್ ಎಂ.ಜಿ ಯಶವಂತ ಶರ್ಮಾ ಅವರಿಗೆ ಗೌರವಾರ್ಪಣೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಗದ್ಗುರುಗಳವರ ಸೂಚನೆಯಂತೆ ಜುಲೈ 22ರಂದು ನಡೆಯಬೇಕಾಗಿದ್ದ ವಿದ್ಯಾರ್ಥಿ ಅಭಿನಂದನಾ ಸಮಾರಂಭ ವನ್ನು ತಾ.27.07.2025 ರ ಭಾನುವಾರಕ್ಕೆ ಮುಂದೂಡಲಾಗಿದೆ. ದಿನಾಂಕ 27.07.2025ರ ಭಾನುವಾರದಂದು ಮದ್ಯಾಹ್ನ ಘಂಟೆ 11.30, ಜಗದ್ಗುರುಗಳ ಜನ್ಮವರ್ಧಂತಿ ಪ್ರಯುಕ್ತ ನಡೆಯುವ ವಿದ್ಯಾರ್ಥಿ ಅಭಿನಂದನಾ ಕಾರ್ಯಕ್ರಮ ದಲ್ಲಿ ಎಸ್ ಎಸ್ ಎಲ್ ಸಿ, ಪಿ ಯು.ಸಿ ಪರೀಕ್ಷೆಯಲ್ಲಿ 95%ಕ್ಕಿಂತ ಅಧಿಕ ಅಂಕಗಳಿಸಿದವರು, ಪದವಿ, ಸ್ನಾತಕೋತ್ತರ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಗಳಿಸಿದವರು, ಪಿ,ಎಚ್ ಡಿ ಪದವೀಧರರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಡಾ. ಜಿ.ರಾಮಕೃಷ್ಣ ಆಚಾರ್ ಮೂಡಬಿದ್ರೆ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರು ಎಸ್ ಕೆ. ಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್ ಮೂಡಬಿದ್ರೆ, ಡಾ. ಹರೀಶ್ ಆಚಾರ್ಯ ಜಲಕದಕಟ್ಟೆ ಅಧ್ಯಕ್ಷರು ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು,
ಶ್ರೀ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು, ಅಧ್ಯಕ್ಷರು ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೊ.ಆಪ್ ಸೊಸೈಟಿ ಮಂಗಳೂರು,
ಡಾ. ಬಾಲಕೃಷ್ಣ ಹೊಸಂಗಡಿ, ಸಹ ಪ್ರಾಧ್ಯಾಪಕರು, ಸರಕಾರಿ ಕಾಲೇಜು ಕಾಸರಗೋಡು, ಡಾ. ಎಸ್. ಪಿ ಗುರುದಾಸ್ ಮಂಗಳೂರು, ಉಪನ್ಯಾಸಕರು ಎಸ್ ಎನ್ ಎಮ್ ಪಾಲಿಟೆಕ್ನಿಕ್ ಮೂಡಬಿದ್ರೆ , ಕೀರ್ತನಕಾರರು ಹಾಗೂ ಅಧ್ಯಕ್ಷರು ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ಭಾಗವಹಿಸುವರು. ಸಮಾರಂಭಗಳಲ್ಲಿ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರು ಕಟಪಾಡಿ ಪಡುಕುತ್ಯಾರು ಇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ, ಕಟಪಾಡಿ ವಹಿಸುವರು. ಮಹಾಸಂಸ್ಥಾನದ ದೇವಸ್ಥಾನಗಳ ಧರ್ಮದರ್ಶಿಗಳು, ಸಹ ಟ್ರಸ್ಟ್ ಮತ್ತು ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿರುವರು.

