ಸಂವಿಧಾನ .ಓದದೆ ಇರುವವರಿಂದ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. 15 ದಿನದಲ್ಲಿ ಹತ್ತು ಜನ ಕುಳಿತುಕೊಂಡು ತಯಾರಿಸಿದ ಸಂವಿಧಾನ ಒಪ್ಪಲು ಸಾಧ್ಯವೇ ಇಲ್ಲ ಹೊಸ ಸಂವಿಧಾನ ತರಲು ಹೊರಟರೆ ಅದಕ್ಕೆ ವಿರೋಧ ಮಾಡಲು ಈಗಿನಿಂದಲೇ ಪ್ರಾರಂಭಮಾಡೋಣ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಪ್ರಯುಕ್ತ ಹಿರಿಯಡ್ಕದಲ್ಲಿ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜರಗಿದ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಿಂದು ರಾಷ್ಟ್ರದ ಸಂವಿಧಾನದ ತಯಾರಾಗಿದೆ ನಮ್ಮ ಸಂವಿಧಾನವನ್ನು

ಉಳಿಸುವ ಅವಕಾಶ ಬಂದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೂ ತಯಾರಾಗಬೇಕು ಎಂದು ಹೇಳಿದರು ಕಾಂಗ್ರೆಸ್ ನ ಯುವ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾದ ನಿಕೀತ್ ರಾಜ್ ಮೌರ್ಯ ಹಾಗೂ ಸುಧೀರ್ ಕುಮಾರ್ ಮುರುಳಿ ಮುಖ್ಯ ಭಾಷಣ ಮಾಡಿದರು. ಉಡುಪಿ ಕಾಂಗ್ರೆಸ್ ನ ಹಿರಿಯ ಮುಖಂಡ ಜಯಂತ್ ರಾವ್ ಎಲ್ಲರನ್ನೂ ಸ್ವಾಗತಿಸಿದರು, ಕಾಂಗ್ರೆಸ್ ಮುಖಂಡರುಗಳಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಗೋಪಾಲ ಪೂಜಾರಿ, ಅಶೋಕ್ ಕೊಡವೂರು, ವಿರೋನಿಕ ಕರ್ನೇಲಿಯೂ ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಪಕ್ಕಾಲು ಮುಂತಾದವರು ಉಪಸ್ಥಿತರಿದ್ದರು. ನಾಗೇಶ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು

