ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಚುನಾವಣೆ ಅಧಿಕಾರಿ ಶ್ರೀಮತಿ ಜಯಂತಿ ಎಸ್ ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಶಿವಾಜಿ.ಎಸ್.ಸುವರ್ಣ ಹಾಗೂ ಉಪಾಧ್ಯಕ್ಷರಾಗಿ ಮೈಮುನ ಅವಿರೋಧ ರಾಗಿ ಆಯ್ಕೆ ಯಾಗಿರುತ್ತಾರೆ ನಿರ್ದೇಶಕರಾದ ವಿನ್ಸೆಂಟ್ ಫೆನಾಂಡಿಸ್, ರಿತೇಶ್ ಎಸ್ ಸುವರ್ಣ, ಆಂಡ್ರು ಗ್ರೆಗೊರಿ ಡಿಸೋಜ, ಮಹಮ್ಮದ್ ಹನೀಫ್, ದಯಾನಂದ ಶೆಟ್ಟಿ, ರಜನೀಶ್, ಅಲ್ಲೋನ್ಸ್ ಕುಲಚಂದ್ರ ಆಲ್ವಾ, ರಂಜನಿ ಹೆಗ್ಡೆ, ರಾಜೇಂದ್ರ ಕುಮಾರ್, ಕರುಣಾಕರ ಪಾನರ ಇವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಜಯಂತಿ ಹಾಗೂ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಬಾಲಗೋಪಾಲ ಬಲ್ಲಾಳ್ ಹಾಗೂ ಚುನಾಯಿತ ಸದಸ್ಯರು ಉಪಸ್ಥಿತಿತರಿದ್ದರು, ಈ ಸಂದರ್ಭದಲ್ಲಿ ಶ್ರೀಮತಿ ಜಯಂತಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿವರ್ಗ

