×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿ : ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷ ರಾಗಿ ವಿಜಯ್ ಕುಮಾರ್ ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋ ಅವಿರೋಧವಾಗಿ ಆಯ್ಕೆ

ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಇಂದು ಬೆಳಿಗ್ಗೆ ಗಂಟೆ 11ಕ್ಕೆ ಕಟಪಾಡಿ ಪ್ರಧಾನ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಶ್ರೀಮತಿ ಜಯಂತಿ ಎಸ್ ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಮೂರನೇ ಬಾರಿಗೆ ವಿಜಯ್ ಕುಮಾರ್ ಉದ್ಯಾವರ ಹಾಗೂ ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋ ನಿರ್ದೇಶಕರಾಗಿ ಮುರಳೀಧರ ಪೈ,ಗೋಪಾಲಕೃಷ್ಣ ರಾವ್, ಯೋಗೀಶ್, ರವಿಕುಮಾರ್, ಇಂದು ಶೇಖರ ಸುವರ್ಣ, ಪವಿತ್ರ ಆರ್ ಶೆಟ್ಟಿ, ಅಶೋಕ್ ರಾವ್, ಕವಿತಾ ಶಂಕರ್, ತ್ರಿವೇಣಿ ಅವಿರೋಧ ರಾಗಿ ಆಯ್ಕೆ ಯಾಗಿರುತ್ತಾರೆ.ಇವರನ್ನು ಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬಿ ಜೆ ಪಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ಕ್ಷೇತ್ರ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಇವರು ಶುಭ ಹಾರೈಸಿದ್ದಾರೆ. ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾದ ಬಾಲಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *