×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ : ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಉಡುಪಿ ದೂರದೃಷ್ಟಿಯ ನಾಯಕ: ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮ ಶತಮಾನೋತ್ಸವ ಅಭಿನಂದನೆ : ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಯೋಜನೆಗೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉದ್ಘಾಟಿಸಿದರು.

ಕರಾವಳಿಯ ಸ್ವರ್ಣೋದ್ಯಮದ ಪಿತಾಮಹ, ಸಮಾಜ ಸೇವಕ ಹಾಗೂ ರಾಷ್ಟ್ರೀಯ ಚಿಂತಕ ಸ್ವರ್ಗೀಯ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಉಡುಪಿಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ನೂರು ವರ್ಷಗಳ ಯಶೋಗಾಥೆಯ ನೆನಪಿಗಾಗಿ, ಅವರ ಜೀವನ ಮತ್ತು ಸಾಧನೆಗಳನ್ನು ಒಳಗೊಂಡ ‘ಗುಜ್ಜಾಡಿಯವರ ನೆನಪುಗಳು’ ಎಂಬ ಪ್ರಮುಖ ಆತ್ಮಕಥನ ಮಾದರಿಯ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು

ದತ್ತಾತ್ರೇಯ ಹೊಸಬಾಳೆ: ರವರು ಮಾತನಾಡಿ”ಗುಜ್ಜಾಡಿ ನರಸಿಂಹ ನಾಯಕ್ ಅವರು ಕೇವಲ ಒಬ್ಬ ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ರಾಷ್ಟ್ರೀಯ ಚಿಂತನೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಧುರೀಣರು. ಅವರ ತತ್ತ್ವ ಹಾಗೂ ಜೀವನ ಮೌಲ್ಯಗಳು ಇಂದಿನ ತಲೆಮಾರಿಗೆ ದಾರಿದೀಪ.ಒಂದು ಕುಟುಂಬ ಉದ್ಯಮವನ್ನು 100 ವರ್ಷಗಳ ಕಾಲ ಮೌಲ್ಯ, ನಂಬಿಕೆ ಮತ್ತು ದೂರದೃಷ್ಟಿಯಿಂದ ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ. ಗುಜ್ಜಾಡಿ ಕುಟುಂಬದ ಈ ಯಶಸ್ಸಿನ ಪಯಣ ಮುಂದಿನ ಪೀಳಿಗೆಗೆ ಪ್ರೇರಣೆ.”ಎಂದು ತಿಳಿಸಿದರು ಈ ಸಂದರ್ಭದಲ್ಲಿ

ವಿಶ್ವ ಹಿಂದು ಪರಿಷತ್ತಿನ ಹಿರಿಯ ಕಾರ್ಯಕರ್ತ ಮೈ.ನ. ನಾಗರಾಜ್, ಆರ್ಟ್ ಆಫ್ ಜುವೆಲರಿ ಸಂಪಾದಕ ಸುಮೇಶ್ ವಧೇರ, ಕೈಗಾರಿಕ ಸಲಹೆಗಾರ ಉಲ್ಲಾಸ್ ಕಾಮತ್, ಹಿರಿಯ ಸ್ವಯಂಸೇವಕ ಹೆಬ್ರಿ ಬಾಲಕೃಷ್ಣ ಮಲ್ಯ, ‘ಗುಜ್ಜಾಡಿಯವರ ನೆನಪುಗಳು’ ಆತ್ಮಕಥನವನ್ನು ಸಂಗ್ರಹಿಸಿ ನಿರೂಪಿಸಿದ ಹಿರಿಯ ಪತ್ರಕರ್ತ ಪಿ. ಸತೀಶ್ ಮಲ್ಯ; ಸ್ವರ್ಣ ಜುವೆಲ್ಲರ್‌ಸಂಸ್ಥೆಯ ಗುಜ್ಜಾಡಿ ಪ್ರಭಾಕರ ನಾಯಕ್ ಸಹೋದರರು, ಸಹೋದರಿಯರು, ಕುಟುಂಬಸ್ಥರು ನರಸಿಂಹ ನಾಯಕ್ ಅವರು ಸ್ಥಾಪಿಸಿದ ಸ್ವರ್ಣ ಜುವೆಲ್ಲರ್ ಸಂಸ್ಥೆಯ ಪರವಾಗಿ ಗುಜ್ಜಾಡಿ ಪ್ರಭಾಕರ ನಾಯಕ್ ಕಾರ್ಯಕ್ರಮ ನಿರ್ವಹಿಸಿ, ಗುಜ್ಜಾಡಿ ರಾಮದಾಸ್ ನಾಯಕ್ ಪ್ರಸ್ತಾವನೆಗೈದರು. ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಮಂದಿಸಿದರು. ಗುಜ್ಜಾಡಿ ಮಾಧವ ನಾಯಕ್ ಸಹಿತ ಸಹೋದರರು. ಸಹೋದರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *