ಮಣಿಪಾಲ ;ದೈವಸ್ಥಾನದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಭಾಸ್ಕರ್ ಎಂಬಾತನ್ನು ಮಣಿಪಾಲ ಪೊಲೀಸರು ಮೇ 19ರಂದು ಬಂಧಿಸಿದ್ದಾರೆ .ಹಿರೇಬೆಟ್ಟು ದೈವಸ್ಥಾನದಲ್ಲಿ ಕಳವು ಮಾಡಿದ ಹಿರೇಬೆಟ್ಟುವಿನ ಭಾಸ್ಕರ್ ಶೆಟ್ಟಿ(49) ಬಂಧಿತ ಆರೋಪಿ. ಹಿರೇಬೆಟ್ಟುವಿನ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಈತ, ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಾಗ್ರಿ, ಗಂಟೆ ಸೇರಿದಂತೆ ಸುಮಾರು 50 ಸಾವಿರ ರೂ.ಮೌಲ್ಯದ ಸೊತ್ತುಗಳನ್ನು ಎಗರಿಸಿದ್ದ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


