×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಗೂಡು ದೀಪ ಸ್ಪರ್ಧೆಯಿಂದ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮವಾಗಿದೆ –  ಡಿ. ಆರ್. ರಾಜು

ಪಡುಬಿದ್ರಿ, ಅ. 28: ಪಡುಬಿದ್ರಿಯ ರಾಗ್ ರಂಗ್ ಕಲ್ಚರಲ್ ಹಾಗೂ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಸ್ಪರ್ಧೆ ಭಾನುವಾರ ಸಂಜೆ ನಡೆಯಿತು.  ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪಡುಬಿದ್ರಿಯ ರಾಗ್ ರಂಗ್ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಗೂಡುದೀಪಗಳ ಸ್ಪರ್ಧೆಯನ್ನೂ ಆಯೋಜಿಸಿ ಗೂಡು ದೀಪ ಸ್ಪರ್ಧೆಯಿಂದ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮವಾಗಿದೆ ಗ್ರಾಮದ ಜನರೆಲ್ಲರೂ ಸಂತೋಷಿತರಾಗುವಂತೆ ಮಾಡಿದ್ದಾರೆ. ದೀಪಗಳ ಹಬ್ಬ ದೀಪಾವಳಿಗೆ ಅದರದ್ದೇ ಆದ ವಿಶಿಷ್ಟ ಮಹತ್ವವಿರುವುದಾಗಿ ಡಿ. ಆರ್. ರಾಜು ಹೇಳಿದರು. ಈ ಸಂದರ್ಭ ಭಾರತೀಯ ನೌಕಾದಳದ ನಿವೃತ್ತ ಗುಣವಂತ ನಿಯಂತ್ರಣ ಅಧಿಕಾರಿ ನಟರಾಜ್ ಪಿ. ಎಸ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.   ಮುಂಬಯಿಯ ಶಿವಾಯ ಫೌಂಡೇಶನ್‌ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಹಾಜಿ ಗುಲಾಂ ಮಹಮ್ಮದ್, ನವೀನ್ ಎನ್. ಶೆಟ್ಟಿ, ಪಿ. ಕೃಷ್ಣ ಬಂಗೇರ, ರಮೀಝ್ ಹುಸೈನ್, ಶಿವಕುಮಾರ್ ಕರ್ಜೆ, ಗೀತಾ ಅರುಣ್, ರಾಜೇಶ್ವರಿ ಅವಿನಾಶ್ ಮಾತನಾಡಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ  ಹೇಮಚಂದ್ರ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಣೇಶ್ ಎನ್. ಕೋಟ್ಯಾನ್, ಸುನಿಲ್ ಕುಮಾರ್, ವೈ. ಸುಕುಮಾರ್, ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್ ಸಾಲ್ಯಾನ್ ಪೆರ್ಡೂರು, ಎಂ. ಎಸ್. ಶಾಫಿ, ಕರುಣಾಕರ ಪೂಜಾರಿ, ಪ್ರಕಾಶ್ ಶೆಟ್ಟಿ ಬಜಗೋಳಿ, ನಮೃತಾ ಮಹೇಶ್, ರಚನ್ ಸಾಲ್ಯಾನ್ ಉಪಸ್ಥಿತರಿದ್ದರು. ರಾಗ್ ರಂಗ್ ಸಂಸ್ಥೆಯ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.  ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು. ಅವಿತಾ ಪಡುಬಿದ್ರಿ ವಂದಿಸಿದರು.  ಉಭಯ ಜಿಲ್ಲೆಗಳಿಂದ 35 ಗೂಡುದೀಪ ಸ್ಪರ್ಧಾಳುಗಳು ಭಾಗವಹಿಸಿದ್ದರು. ರೋಹಿತ್ ಕುಮಾರ್ ಪಜಿರ್, ಮನೋಜ್ ಕನಾಪಡಿ ಮತ್ತು ರಮಾಂಜಿ ಉಡುಪಿ ತೀರ್ಪುಗಾರರಾಗಿದ್ದರು. ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ), ಆದಿತ್ಯ ಗುರುಪುರ (ದ್ವಿತೀಯ), ದಿಯಾನ್ ಉಡುಪಿ(ತೃತೀಯ). ಆಧುನಿಕ ವಿಭಾಗದಲ್ಲಿ ವಿಠಲ್ ಭಟ್ ಮಂಗಳೂರು (ಪ್ರಥಮ), ಜಗದೀಶ್ ಅಮೀನ್ ಸುಂಕದಕಟ್ಟೆ (ದ್ವಿತೀಯ), ಉಮೇಶ್ ಮಂಗಳೂರು (ತೃತೀಯ) ಬಹುಮಾನಗಳನ್ನು ಗಳಿಸಿದ್ದಾರೆ.

Leave a Reply

Your email address will not be published. Required fields are marked *