
ಸಹಕಾರ ಸಪ್ತಾಹ ಅಂಗವಾಗಿ “ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯ ವರ್ಧನೆ” ಕಾರ್ಯಕ್ರಮ ವನ್ನು ಮಂಗಳವಾರ ಪಡುಬಿದ್ರಿ ಸಹಕಾರ ಸಂಘಮದ ವೈ .ಲಕ್ಷ್ಮಣ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನವೆಂಬರ್ ೧೪ ರಿಂದ ೨೦ ರ ವರೆಗೆ ಅಖಿಲ ಭಾರತ ಮಟ್ಟದಲ್ಲಿ ಆಚರಿಸಲ್ಪಡುತ್ತದೆ. ಅದರಲ್ಲೂ ಪಡುಬಿದ್ರಿ ಸೊಸೈಟಿ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಉಡುಪಿ ಯಲ್ಲಿ ಸಾಧಾರಣ ೮೦೦ ಸಹಕಾರಿ ಸಂಸ್ಥೆ ಗಳಿವೆ. ಎಲ್ಲಾ ಸಹಕಾರಿ ಗಳು ಸೇರಿ ಗ್ರಾಹಕರ ಲ್ಲಿ ಜ್ನಾನ ದ ಬೀಜ ಬಿತ್ತುವ ಮೂಲಕ ಸಹಕಾರಿ ಯಾಗಬೇಕು ಎಂದರು. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್ ಪಾಲ್ ಎ.ಸುವರ್ಣ ಮಾತನಾಡಿ ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ದಿಂದಲೂ ಸಹಕಾರಿ ಕ್ಷೇತ್ರ ಕಾರ್ಯಾಚರಿಸುತ್ತಿದೆ. ದೇಶದ ೪೫ ಶೇಕಡಾ ಜನರು ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಆರ್ಥಿಕ ವ್ಯವಸ್ಥೆ ಗೆ ಸಹಕರಿಸಿದ್ದಾರೆ. ಈ ಸಂದರ್ಭ ಪ್ರತೀಕ ಮತ್ತು ವೈಶಾಲಿ ಗೆ ವಿದ್ಯಾರ್ಥಿ ವೇತನ ನೀಡಿದ ರು.
ವೇದಿಕೆಯ ಲ್ಲಿ ಲಕ್ಷ್ಮೀ ನಾರಾಯಣ ಜಿ.ಎನ್,ಡಾ.ಗಣನಾಥ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

