ಜನರ ಮನೆ ಗ್ರಾಮಪಂಚಾಯತ್ ಆಗಿದೆ ಎಲ್ಲಾ ಸಮುದಾಯದ ಎಲ್ಲಾ ಜನರು ಅನಿವಾರ್ಯ ಕಾರ್ಯ ಗಳಿಗೆ ಗ್ರಾಮಪಂಚಾಯತ್ ನೀಡುತ್ತಾರೆ ಭೇಟಿ ಗ್ರಾಮ ಪಂಚಾಯತ್ ಒಂದು ಸರಕಾರವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಶಿರಿಯಾರ ಗ್ರಾಮ ಪಂಚಾಯತ್ ಉದ್ಘಾಟಿಸಿ ಮಾತನಾಡಿದರು ಸರ್ವಾಂಗೀಣ ಅಭಿವೃದ್ಧಿಗೆ ಪಂಚಾಯತ್ ಮೂಲಕಾರಣ ವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸಾದರಿಗೆಸನ್ಮಾನ ಕಾರ್ಯಕ್ರಮ ನಡೆಯಿತು

ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ ಮಾತನಾಡಿ ಒಳ್ಳೆಯ ಉದ್ದೇಶ ಇಟ್ಟುಕೊಂಡು ಪಂಚಾಯತ್ ಶುಭಾರಂಭಿಸಿದೀರಿ ಪಂಚಾಯತ್ ಸದಸ್ಯರು ಎಲ್ಲಾ ವರ್ಗದ ಜನರನ್ನು ಒಟ್ಟು ಕೂಡಿಸಿ ಕೊಂಡುಹೋದರೆ ಗ್ರಾಮಪಂಚಾಯತ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ಹೇಳಿ ಶುಭ ಹಾರೈಸಿದರು ಕಾರ್ಯಕ್ರಮದ ಆರಂಭದಲ್ಲಿ ಕಟ್ಟಡ ನಿರ್ಮಾಣದ ಪ್ರಮುಖ ರೂವಾರಿಗಳಾದ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿಯವರಿಗೆ ಸಾರ್ವಜನಿಕರ ವತಿಯಿಂದ ಗೌರವಾರ್ಪಣೆ ನೆರವೇರಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಡಿ ಗೌರವಾರ್ಪಣೆ ನೆರವೇರಿಸ
ಸ್ಥಳೀಯರ ಪರವಾಗಿ ಉಮೇಶ್ ಬಂಗೇರ ಮಾತನಾಡಿ, ಸುಮಾರು 45 ವರ್ಷಗಳ ಹಿಂದಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅನುದಾನದ ಕೊರತೆ ನಡುವೆಯೂನಿರ್ಮಿಸಿ ನಮ್ಮ ಗ್ರಾಮಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಗ್ರಾ.ಪಂ. ಅಧ್ಯಕ್ಷೆ ಸುಧೀಂದ್ರ ಶೆಟ್ಟಿಅವರ ಕೆಲಸ ಶ್ಲಾಘನೀಯ ಮತ್ತು ಅವರಿಗೆ ಸಹಕಾರ ನೀಡಿದ ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಕೂಡ ಉತ್ತಮ ಕಾರ್ ನಿರ್ವಹಿಸಿದ್ದಾರೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಗ್ರಾ.ಪಂ. ಪಿ.ಡಿ.ಒ: ದಿನೇಶ್ ಶೆಟ್ಟಿಕಂಗಿಬೆಟ್ಟು ಹಾಗೂ ಸಹಕಾರ ನೀಡಿದ ಶಿರಿಯಾರ ವ್ಯವಸಾಯ ಸಂಘದ ಪರವಾಗಿ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಅವರನ್ನು ಜೈ ಗಣೇಶ ಸಹಕಾರಿ ಪರವಾಗಿ ಅಧ್ಯಕ್ಷರಾದ ಅಶೋಕ್ ಪ್ರಭು ಅವರನ್ನು ಮತ್ತು ಕಟ್ಟಡ ಗುತ್ತಿಗೆದಾರರು,ಮತ್ತು ಎಲ್ಲಾ ಸದಸ್ಯರಿಗೂ ಸಿಬ್ಬಂದಿಗಳಿಗೂ ಸಹಕರಿಸಿದವರನ್ನು ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು ಅಮಿತಾ ಉಪಾಧ್ಯಕ್ಷರು ಶಿರಿಯಾರ ಗ್ರಾ.ಪಂ ಸದಸ್ಯರುಗಳಾದ ಶ್ರೀ ಹರೀಶ್ ಆರ್ ಕಾಂಚನ್ , ಸಂಜೀವ ಪೂಜಾರಿ , ಶ್ರೀಮತಿ ಭಾರತಿ , ಶ್ರೀ ಪ್ರದೀಪ ಬಲ್ಲಾಳ್ , ಶ್ರೀಮತಿ ಗಾಯತ್ರಿ , ಶ್ರೀಮತಿ ವಿಶಾಲ , ಶ್ರೀಮತಿ ಪ್ರಮೀಳ , ಶ್ರೀಮತಿ ಕೆ.ರಾಜೀವಿ , ಶ್ರೀ ಕಿರಣ್ ಕುಮಾರ್ ಶೆಟ್ಟಿ , ಶ್ರೀ ಚಂದ್ರ ಶೆಟ್ಟಿ , ಶ್ರೀಮತಿ ಕೆ.ಮೀನಾಕ್ಷಿ ,ಸ್ಥಳೀಯರು ಉಪಸ್ಥಿತರಿದ್ದರು


