×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಹೆತ್ತವರು ಮತ್ತು ಪೋಷಕರಿಗಾಗಿ ವಾರ್ಷಿಕ ಕ್ರೀಡಾಕೂಟ

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ವಿವಿಧ ಕ್ರೀಡೆಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನಾವು ಎಲ್ಲೆಡೆ ಗಮನಿಸಿಕೊಂಡು ಬರುತ್ತಿದ್ದೇವೆ. ಆದರೆ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹೆತ್ತವರು ಮತ್ತು ಪೋಷಕರಿಗಾಗಿಯೂ ಕ್ರೀಡಾಕೂಟ ಆಯೋಜನೆಯ ಮೂಲಕ ಹೆತ್ತವರಲ್ಲೂ ಅಡಗಿರುವ ಪ್ರತಿಭೆಯನ್ನು ಹೊರ ಸೂಸುವ ಪ್ರಯತ್ನ ಶನಿವಾರ ನಡೆಯಿತು  ಕ್ರೀಡಾಕೂಟವನ್ನು ಉದ್ಘಾಟಿಸಿದ ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಎಲ್ಲರಲ್ಲೂ ಸ್ಪೂರ್ತಿ ತುಂಬಿ, ಲವಲವಿಕೆಯನ್ನು ಹೆಚ್ಚಿಸುವಲ್ಲಿ ಕ್ರೀಡಾಕೂಟ ಸಹಕಾರಿಯಾಗಲಿದೆ. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು ಈ ಬಾರಿಯೂ ಹೆತ್ತವರಿಗಾಗಿ ವೈಶಿಷ್ಟ ಪೂರ್ಣವಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿ ವಿದ್ಯಾಸಂಸ್ಥೆಯಾಗಿ ಮೂಡಿ ಬಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ. ಪಿ. ಆಚಾರ್ಯ ಮಾತನಾಡಿ, ಕೊರೊನಾ ಪೂರ್ವದಲ್ಲಿ ನಿಂತು ಹೋಗಿದ್ದ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡಲಾಗಿದ್ದು ವಿದ್ಯಾರ್ಥಿಗಳು ಮತ್ತು ಮಕ್ಕಳ ಹೆತ್ತವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವೇಷಣೆಗೆ ವೇದಿಕೆ ಒದಗಿಸಿ, ಮಕ್ಕಳ ಜತೆಗೆ ಹೆತ್ತವರನ್ನು ಉತ್ತೇಜಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಸಹ ಉಪಾಧ್ಯಕ್ಷೆ ಶ್ವೇತಾ ಕಾಪು, ಉದ್ಯಮಿ ಸುಶೀಲ್ ಬೋಳಾರ್, ವಿದ್ಯಾರ್ಥಿಗಳ ಪೋಷಕರಾದ ಯೋಗೀಶ್ ಪೂಜಾರಿ, ರಾಘವೇಂದ್ರ ಆಚಾರ್ಯ, ರಾಕೇಶ್ ಕುಂಜೂರು ಶುಭಾಶಂಸನೆಗೈದರು. ಪ್ರಭಾರ ಪ್ರಾಂಶುಪಾಲೆ ರಂಜಿತಾ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಾಕ್ಸ್ ಐಟಂಗೆ ಪೋಷಕರಿಗಾಗಿ ೧೦೦ ಮೀಟರ್ ಓಟ, ಗುಂಡೆಸೆತ, ಸಂಗೀತ ಕುರ್ಚಿ, ಹೋಲ್ಡಿಂಗ್ ದ ಸ್ಟಿಕ್, ಬಲೂನು ಒಡೆಯುವಿಕೆ, ಬಾಂಬ್ ಇನ್ ದ ಸಿಟಿ, ತ್ರೋಬಾಲ್, ಶಟ್ಲ್ ಬ್ಯಾಟ್ಮಿಂಟನ್, ಕ್ರಿಕೆಟ್ ಪಂದ್ಯಾಟ ಸಹಿತ ವಿವಿಧ ಸ್ಪರ್ಧೆಗಳು ನಡೆದವು. ಸುಮಾರು ೨೫೦ಕ್ಕೂ ಅಽಕ ಮಂದಿ ಪೋಷಕರು ಮತ್ತು ಹೆತ್ತವರು ಉತ್ಸಾಹದೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು 

Leave a Reply

Your email address will not be published. Required fields are marked *