×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸ್ವಪಕ್ಷಿಯರಿಂದಲೇ ಶಾಸಕ ಸುನೀಲ್ ಕುಮಾರಿಗೆ ಮಂಗಳಾರತಿ

ಕಾಪು ಪುರಸಭೆಯಲ್ಲಿ ಬಿಜೆಪಿ, ಎಸ್ಡಿಪಿಐ ಅದಿಕಾರ ಹಂಚಿಕೆ ಸುನೀಲ್ ಕುಮಾರ ರಿಗೆ ಮುಖಭಂಗವಲ್ಲವೇ? ಸ್ಥಳೀಯಾಡಳಿತದಲ್ಲಿ ಕಾಂಗ್ರೇಸ್ ,ಎಸ್ಡಿಪಿಐ ಆಡಳಿತದ ಬಗ್ಗೆ ವಿರೋದ ಹೇಳಿಕೆ ನೀಡಿದ ಶಾಸಕ ಸುನೀಲ್ ಕುಮಾರರಿಗೆ ಕಾಪುವಿನಲ್ಲಿ ಸ್ವಪಕ್ಷೀಯರಿಂದಲೇ ಮಂಗಳಾರತಿಯಾಗಿದೆ, ಈಗ ಬಗ್ಗೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸುತ್ತೇನೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದರೆ. ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೇಸ್, ಎಸ್ಡಿಪಿಐ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಆಕಾಶ ಕಳಚಿ ಬಿದ್ದಂತೆ ವರ್ತಿಸಿ ಹೇಳಿಕೆಗಳನ್ನು ನೀಡಿದ ಶಾಸಕ ಸುನೀಲ್ ಕುಮಾರ್ ಕಾಪು ಪುರಸಭೆಯಲ್ಲಿ ಬಿಜೆಪಿ, ಎಸ್ಡಿಪಿಐ ಜೊತೆಯಾಗಿ ಅಧಿಕಾರ ಹಂಚಿಕೊಂಡಾಗ ಮೌನವಾಗಿದ್ದಾರೆ, ಬೇರೆ ಜಿಲ್ಲೆಯ ಸ್ಥಳಿಯಾಡಳಿತ ಬಗ್ಗೆ ಅವಮಾನಕಾರ ಹೇಳಿಕೆ ನೀಡಿದ ಶಾಸಕರಿಗೆ ತನ್ನ ತವರು ಜಿಲ್ಲೆಯಲ್ಲೇ ಮುಖಭಂಗವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಎಸ್ಡಿಪಿಐ ಬಗ್ಗೆ ಕಾಂಗ್ರೇಸ್ ದ್ವಂದ್ವ ನಿಲುವು ತಾಳಿ ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸುತಿದೆ, ನಿಷೇದಿತ ಪಿಎಫ್ಐ ಜತೆ ಅಂತರ್ ಸಂಬಂಧವಿರುವ ಎಸ್ಡಿಪಿಐ ಜೊತೆ ಕಾಂಗ್ರೇಸ್ ಸಂಬಂಧ ಅಪಾಯದ ಸೂಚನೆ ಎಂದಿರುವ ಶಾಸಕರು ಕಾಪು ಪುರಸಭೆಯಲ್ಲಿ ಎಸ್ಡಿಪಿಐ ಜೊತೆ ಅಧಿಕಾರ ಹಂಚಿಕೊಂಡಿರುವುದು ಅಪಾಯದ ಸೂಚನೆಯೇ? ಎಂಬುದನ್ನು ತಿಳಿಸಿ ಎಸ್ಡಿಪಿಐ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ. ಇತೀಚಿನ ದಿನಗಳಲ್ಲಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ಮತ್ತು ಭಾಷಣಗಳೇ ತಮಗೆ ಮುಳುವಾಗುತಿದೆ ಇದು ಮುಂದಿನ ಯಾವುದೋ ಒಂದು ಹಿನ್ನಡೆಯ ಸೂಚನೆಯನ್ನು ನೀಡುವಂತಿದೆ ಮಾತನಾಡುವಾಗ ಎಚ್ಚರವಹಿಸಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *