ನಮ್ಮ ನಾಡ ಒಕ್ಕೂಟ(ರಿ) ಕಾಪು ತಾಲೂಕು ಹಾಗೂ ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಚಂದ್ರನಗರ ಇವರ ವತಿಯಿಂದ ಮರ್ಹೂಂ ಹಾಜಿ ಕೆ.ಉಮ್ಮರಬ್ಬ ರವರ ಸ್ಮರಣಾರ್ಥ 27 ಮಕ್ಕಳ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮ ಹಾಗೂ ಉಚಿತ ಮೆಡಿಸಿನ್ ಮತ್ತು ಮನೆ ಸಾಮಗ್ರಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಬದ್ರಿಯಾ ಜುಮ್ಮಾಮಸ್ಜಿದ್ ಧರ್ಮ ಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಅಲ್ ಖಾಮಿಲ್ ರವರು ದುವಾದೊಂದಿಗೆ ಕಾರ್ಯಕ್ರಮವನ್ನು ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ನಲ್ಲಿ ಪ್ರಾರಂಭಿಸಲಾಯಿತು ಉದ್ಘಾಟನೆಯನ್ನು ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಅಧ್ಯಕ್ಷರು ಸಮಾಜ ಸೇವಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ನೆರವೆರಿಸಿದರು ತದ ನಂತರ ಮಾತನಾಡಿದ ಅವರು ಸಮಾಜ ಸೇವೆಯೆ ನನ್ನ ತಂದೆಯ ಕನಸಾಗಿತ್ತು ಸಮಾಜದಲ್ಲಿ ಆಶಕ್ತರು ಬಡವರಿಗಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸಿತ್ತು ಇವತ್ತು ಸಾಮೂಹಿಕ ಮುಂಜಿ ಕಾರ್ಯಕ್ರಮವನ್ನು ಸಮಾಜದಲ್ಲಿ ಉತ್ತಮ ಸಾಮಾಜಿಕ ಕಾರ್ಯಕ್ರಮ ಹಾಕಿಕೊಳ್ಳುವ ಏನ್ ಏನ್ ಓ ಜಂಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜ ಸೇವೆ ಮಾಡಿದ್ದು ತೃಪ್ತಿಕರವಾಗಿದೆ ಎಂದು ತಿಳಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಅಶ್ರಫ್ ಪಡುಬಿದ್ರೆ ಮಾತನಾಡಿ ಹಾಜಿ ಉಮ್ಮರಬ್ಬ ನವರ ಸೇವೆಯನ್ನು ನೆನಪಿಸಿ ಅವರೊಬ್ಬ ಉತ್ತಮ ಜನಸ್ನೇಹಿಯಾಗಿದ್ದರು ಎಂದು ತಿಳಿಸಿದರು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್ ಪ್ರಾಸ್ತವಿಕವಾಗಿ ಮಾತನಾಡಿ ಜಂಟಿ ಸಂಸ್ಥೆ ಮಾಡುವ ಸಮಾಜ ಸೇವೆ ದೇವರು ಮೆಚ್ಚುವಂತದ್ದು ಎಂದು ತಿಳಿಸಿದರು ಮುಖ್ಯ ಅತಿಥಿಯಾಗಿ ಏನ್ ಏನ್ ಓ ಜಿ ಜಿಲ್ಲಾ ಅಧ್ಯಕ್ಷರು ಮಾತನಾಡಿ ಮುಂದೆಯೂ ಸಾಮಾಜಿಕ ಕೆಲಸಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಏನ್ ಏನ್ ಓ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾಪು ತಾಲೂಕು ಉಸ್ತುವಾರಿ ಯು.ಎ ರಶೀದ್ ,ಸೌದಿ ಅರೇಬಿಯಾ ಅನಿವಾಸಿ ಭಾರತೀಯ ಉದ್ಯಮಿ ಮೊಹಮ್ಮದ್ ಇಲ್ಯಾಸ್ ಹಮೀದ್, ದ.ಕ ಜಿಲ್ಲಾ ಮದ್ರಸ ಮೆನೆಜ್ಮೆಂಟ್ ಜಿಲ್ಲಾಧ್ಯಕ್ಷರಾದ ಎಂ.ಎಚ್ ಹಾಜಿ ಮೊಯಿದಿನ್ ಅಡ್ದುರು, ಏನ್ ಏನ್ ಓ ಪರ್ಯವರಣ ಸಮಿತಿ ರಾಜ್ಯಾಧ್ಯಕ್ಷರಾದ ಡಾ.ಶೇಕ್ ವಹಿದ್ ದಾವುದ್, ಏನ್ ಏನ್ ಓ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಮೊಹಮ್ಮದ್, ಜಮೀಯತುಲ್ ಫಲಹ್ ಕಾಪು ತಾಲೂಕು ಅಧ್ಯಕ್ಷರಾದ ಶಬೀ ಅಹ್ಮದ್ ಖಾಝಿ ಡಾ.ಸಿದ್ದಿಕ್ ಅಡ್ದುರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆ ಅಬ್ದುಲ್ ಹಮೀದ್ ಯೂಸುಫ್ ಮೂಳೂರು ಧನ್ಯವಾದ ಎಸ್ ಎ ಅಬ್ದುಲ್ ರಝಕ್ (ಕೊಪ್ಪ )ಚಂದ್ರನಗರ ಮಾಡಿದರು

