
ಉಚಿಲ ಶ್ರೀ ಸರಸ್ವತಿ ಮಂದಿರ ಶಾಲಾ ವಾರ್ಷಿಕೋತ್ಸವ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಸುರೇಶ್ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವಲ್ಲಿ ಹೆಚ್ಚಿನ ಮುತುರ್ವಜಿವಹಿಸ ಬೇಕಾಗಿದೆ ಎಂದರು. ಈ ಶಾಲೆಯಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಹೆಸರು ತಂದ ಕುಮಾರಿ ಸ್ವಾತಿ ಜೋಶಿ ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರೀತಿಕಾ ಪೂಜಾರಿ ಅವರಿಗೂ ಗಣ್ಯರು ಸನ್ಮಾನ್ಯಸಿದರು. ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್ ದಾಸ್ ಶೆಟ್ಟಿ, ಪ್ರೌಢಶಾಲಾ ಸಂಚಾಲಕ ಗಂಗಾಧರ ಸುವರ್ಣ, ವಿದ್ಯಾಂಗ ಇಲಾಖೆ ಅಧಿಕಾರಿ ಶಂಕರ್ ಸುವರ್ಣ, ಸುರೇಶ್ ಕುತ್ಯಾರು, ಶ್ರೀಮತಿ ಕಲಾವತಿ, ಪ್ರತೀಶ್, ಬಾಬುರಾಯ ಆಚಾರ್ಯ, ರಾಮಕೃಷ್ಣ, ರಾಮಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

