
ಮಣಿಪಾಲ : ಉಡುಪಿ ನಗರದ ಇಂದ್ರಾಳಿ ರೈಲ್ವೇ ಗೋಡೌನ್ ನ ಹಿಂಬದಿಯಲ್ಲಿ ದಾಸ್ತಾನು ಇರಿಸಲಾಗಿದ್ದ ರೈಲ್ವೇ ಹಳಿಗೆ ಬಳಸಾಗುವ ರಬ್ಬರ್ ಗೆ ಬೆಂಕಿ ಹತ್ತಿಕೊಂಡ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಇದರ ಪರಿಣಾಮ ಇಂದ್ರಾಳಿ ಪರಿಸರದಲ್ಲಿ ದಟ್ಟ ಹೊಗೆ ಎದಿದ್ದು ಆತಂಕ ಮೂಡಿಸಿದೆ. ಗೋಡೌನ್ ನ ಹಿಂಬದಿಯಲ್ಲಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. ಎರಡು ಅಗ್ನಿಶಾಮಕ ದಳದ ವಾಹನಗಳು, ಹತ್ತಕ್ಕೂ ಹೆಚ್ಚು ಮಂದಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.ಅಗ್ನಿಶಾಮಕ ದಳದವರು ಘಟನೆ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

