×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯಿಂದ ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ.

ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ವಿಶೇಷ ಸಭೆಯು ಕಾರ್ಯಾಧ್ಯಕ್ಷರಾದ ಶ್ರೀ ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಆರ್ಥಿಕ, ಹೊರೆ ಕಾಣಿಕೆ, ಸಾಂಸ್ಕೃತಿಕ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ ನಡೆಯಿತು. ಸಮಿತಿಯ ಮಹಾ ಪೋಷಕರಾದ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ರವರು ನವರಾತ್ರಿ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯಕ್ಕೆ ಧನ ಹಾಗೂ ಧಾನ್ಯ ಲಕ್ಷ್ಮಿಯ ಅನುಗ್ರಹ ಪ್ರವಾಹ ಹರಿದು ಅಕ್ಷಯ ಆಗಲಿ. ಶ್ರೀ ಕೃಷ್ಣ ಮುಖ್ಯಪ್ರಾಣ ರ ಸೇವೆಯನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ ಎಂದು ತಿಳಿಸಿ, ಹೊರೆ ಕಾಣಿಕೆಯ ಮನವಿಯನ್ನು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಬೆಳಪು ಶ್ರೀ ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ, ಸಂಚಾಲಕರಾದ ಶ್ರೀ ಪ್ರಸಾದ್ರಾಜ್ ಕಾಂಚನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಶ್ರೀ ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಶ್ರೀ ದಿನೇಶ್ ಪುತ್ರನ್, ಶ್ರೀ ಎಂ ಎಲ್ ಸಾಮಗ,ಶ್ರೀ ಶ್ರೀಪತಿ ಭಟ್, ಶ್ರೀ ಹೆಜಮಾಡಿ ದಯಾನಂದ ಬಂಗೇರ ,ಶ್ರೀ ಗಣೇಶ್ ರಾವ್ , ಸಂತೋಷ್ ಶೆಟ್ಟಿ ತೆಂಕರಗುತ್ತು , ಶ್ರೀ ಮಟ್ಟಾರ್ ರತ್ನಾಕರ್ ಹೆಗ್ಡೆ , ಶ್ರೀ ಬಾಲಾಜಿ ಯೋಗೀಶ್ ಶೆಟ್ಟಿ ,ಶ್ರೀ ಎಂ ಎಸ್ ವಿಷ್ಣು ಹಾಗೂ ಸದಸ್ಯರುಗಳಾದ Dr. ಸುದರ್ಶನ್, ಶ್ರೀನಿವಾಸ್ ಯು ಕೆ, ಗುರುರಾಜ ಆಚಾರ್ಯ, ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ ಶ್ರೀ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಸ್ವಾಗತಿಸಿದರು ಶ್ರೀ ರಮೇಶ ಭಟ್ ಕೆ. ಧನ್ಯವಾದ ನೀಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a Reply

Your email address will not be published. Required fields are marked *