×
Our website is made possible by displaying online advertisements to our visitors. Please consider supporting us by whitelisting our website.
  • 9880645340

MLC ಐವನ್ ಡಿಸೋಜಾ ಮನೆ ಮೇಲಿನ‌ ದಾಳಿ ಖಂಡನೀಯ : ಶರ್ಫುದ್ದೀನ್  ಶೇಖ್

ಕಾಂಗ್ರೆಸ್ ಪಕ್ಷದ ನಾಯಕರು,ವಿಧಾನಪರಿಷತ್ತ್ ನ ಸದಸ್ಯರು ಮಾನ್ಯ ಐವನ್ ಡಿಸೋಜ ರವರ ಮನೆಗೆ ಕಳೆದ ರಾತ್ರಿ ಕಿಡಿಹೇಡಿಗಳು ಕಲ್ಲೆಸೆದು ಸಮಾಜದಲ್ಲಿ ಅಶಾಂತಿ, ಕೋಮುಗಲಾಟೆ ಉಂಟುಮಾಡುವ ಹುನ್ನಾರ, ಇದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರು ತೀವ್ರವಾಗಿ ಖಂಡಿಸಿದ್ದಾರೆ.
ಶ್ರೀಯುತ ಐವನ್ ಡಿಸೋಜರವರು ಒಬ್ಬ ಸೆಕ್ಯೂಲರ್,ಅತ್ಯಂತ ಜನಪರ ಕಾಳಜಿಯುಲ್ಲ,ಬಡಜನರ ಪರ ಧ್ವನಿಎತ್ತುವ ಒಬ್ಬ ಸಮರ್ಥ ಜನನಾಯಕ ಇದನ್ನು ಕೋಮುವಾದಿಗಳು ಸಹಿಸದೆ ಹತಾಷೆಯಿಂದ ಅವರ ಮನೆಗೆ ಕಳ್ಳೆಸುವ ಪ್ರಯತ್ನ ಮಾಡಿದ್ದಾರೆ.ಪೋಲೀಸ್ ಅಧಿಕಾರಿಗಳು ಕಿಡಿಗೇಡಿಗಳನ್ನು ಆದಷ್ಚು ಬೇಗ ಭಂಧಿಸಿ ಅವರನ್ನು ಸರಿಯಾಗಿ ತನಿಖೆ ನಡೆಸಿ ಘಟನೆ ಹಿಂದೆ ಯಾರೆಲ್ಲಾ ಇದ್ದಾರೆ ಅವರಿಗೆ ತಕ್ಕದಾದ ಶಿಕ್ಷೆ ನೀಡಬೇಕೆಂದು ಪೋಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ .

Leave a Reply

Your email address will not be published. Required fields are marked *