×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಕ್ಲಸ್ಟರ್ ಮಟ್ಟದಪ್ರತಿಭಾ ಕಾರಂಜಿ ಹಲವು ಪ್ರಶಸ್ತಿಗಳನ್ನು ಮೂಡಿಗೆರಿಸಿದ ಫೈಝುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು

ಉಡುಪಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2023ರಲ್ಲಿ ಸಾಧನೆ ಮೆರೆದ ಶಿರ್ವ ಫೈಝುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಶಿರ್ವ: ಉಡುಪಿ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಕಳತ್ತೂರಿನ ಪಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2023 ಯಲ್ಲಿ ಶಿರ್ವ ಫೈಝುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ. ಶಿರ್ವ ಫೈಝುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಶಾಲೆಯ ಶೇಖ್ ಆಝಿನ್ ಮೆಹತಾಜ್ ಇಂಗ್ಲಿಷ್ ಭಾಷಣದಲ್ಲಿ ಪ್ರಥಮ ಸ್ಥಾನವನ್ನು, ಸಿಮ್ರಾ ಅಂಜುಮ್ ಗಝಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾವವನ್ನು, ಅಕ್ಮಲ್ ಅಬ್ದುಲ್ ರಝಕ್ ಅರೇಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ, ಮೆಹರಾಜ್ ತೃತೀಯ ಸ್ಥಾನವನ್ನು, ಮೊಹಮ್ಮದ್ ಮುಜ್ಹೈನ್ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಮೊಹಮ್ಮದ್ ಅಫ್ನನ್ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಆಯಿಷಾ ಫಾಹಿಮ ಉರ್ದು ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಫಾತಿಮಾ ಝೋಹಾರ ಉರ್ದು ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇಲ್ಹಾಮ್ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಸಾರಾ ಸಮೀಹ ತೃತೀಯ ಸ್ಥಾನವನ್ನು, ಸಿಯಾನ್ ಟೀಮ್ ಖಾವ್ವಾಲಿಯಲ್ಲಿ ದ್ವಿತೀಯ ಸ್ಥಾನವನ್ನು, ಅಫ್ರೋಜ್ ಲಘು ಸಂಗೀತ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ಮೊಹಮ್ಮದ್ ಸಿಯಾನ್ ಹಿಂದಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ಮೊಹಮ್ಮದ್ ರುಮಾನ್ ಭಾವಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ಹೀನಾ ಪರ್ವೀನ್ ಚಿತ್ರ ಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಶಾಲೆಗೆ ಮೆರುಗು ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪೋಷಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *