×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪಗರಿ ಯವರ ಜನ್ಮದಿನದ ಪ್ರಯುಕ್ತ ಶರ್ಫುದ್ದೀನ್ ಶೇಖ್ ರವರ ನೇತೃತ್ವದಲ್ಲಿ ಮಲ್ಲಾರಿನ ಅನ್ವರ್ ಸಾದತ್ ವೃದ್ದಾಶ್ರಮದಲ್ಲಿರುವ ಬಡ ನಿರ್ಗತಿಕರಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ

ಇಂದು ದಿನಾಂಕ 06.08.2024 ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು,ರಾಜ್ಯಸಭಾ ಸದಸ್ಯರಾದ ಜನಾಬ್ ಇಮ್ರಾನ್ ಪ್ರತಾಪಗರಿ ಯವರ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯ ಮಲ್ಲಾರಿನ ಅನ್ವರ್ ಸಾದತ್ ವೃದ್ದಾಶ್ರಮದಲ್ಲಿರುವ ಬಡ ನಿರ್ಗತಿಕರಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಮಾಜ ಸೇವಕರಾದ ಫಾರೂಕ್ ಚಂದ್ರನಗರ,ಮುಖಂಡರಾದ ಎಚ್ ಅಬ್ದುಲ್ಲಾ,ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಗಳಾದ ನಕ್ವಾ ಯಹಿಯ್ಯಾ ಉಡುಪಿ,ಹಸನ್ ಮನಿಪುರ ,,ಮಾಜಿ ಪುರಸಭೆ ಸದಸ್ಯರಾದ ಹಮೀದ್ ಮೂಳೂರು,ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾದಕ್ಷರಾದ ಹಮೀದ್ ಯೂಸುಫ್, ಭೂನ್ಯಾಯ ಮಂಡಳಿಯ ಸದಸ್ಯರಾದ ರಮೀಝ್ ಹುಸೈನ್ ಪಡುಬಿದ್ರಿ , ಅಶೋಕ್ ನಾಯಿರಿ,ಕುರ್ಕಾಲು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ನತಾಲಿಯ ಮಾರ್ಟಿಸ್ ಸದಸ್ಯರಾದ ಸಿಮ್ಮಿ ಡಿಸೋಜ,ಕಾಪು ಪುರಸಭೆ ಸದಸ್ಯರಾದ ಅಮೀರ್ ಮೊಹಮ್ಮದ್, ನಬೀಲ್ ಉದ್ಯಾವರ,ಎಂ ಡಿ ಕೊಟ್ಯಾನ್,ಮುಂತಾದವರು ಉಪಸ್ಥಿತಿತರಿದ್ದರು .ಈ ಸಂಧರ್ಭದಲ್ಲಿ ವೃದ್ದಾಶ್ರಮದ ವ್ಯವಸ್ಥಾಪಕರಾದ ಮಹಮ್ಮದ್ ಕೆರೆಕಾಡ್ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *