
ಕಾಪುವಿನಲ್ಲಿ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿ ಮಾಲೀಕರಿಂದ 6 ಲಕ್ಷ ರೂ. ದೋಚಿದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಕಾಪುವಿನ ಮಹಾಲಸಾ ಸ್ಟೋರ್ ಮಾಲಿಕರಾದ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಗ್ರಾಹಕನ ಸೋಗಿನಲ್ಲಿ ಬಂದು ಮಾಲಕರಿಂದ 6 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ರಾಘವೇಂದ್ರ ಕಿಣಿ ಅವರು ದೂರು ನೀಡಿದ್ದರು. ಕೂಡಲೇ ಕಾರ್ಯಚರಣೆಗಿಳಿದ ಕಾಪುವಿನ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ಇಂದು ಬೆಳಿಗ್ಗೆ ಅಂಗಡಿಗೆ ಕರೆತಂದು ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರ್ಯಾಚರಣೆಯಲ್ಲಿ ಕಾಪು ಠಾಣಾ ಎಎಸ್‌ಐ ದಯಾನಂದ ಹಾಗೂ ಕಾಪು ಠಾಣಾ ಸಿಬಂದಿ ಗಣೇಶ್ ಹಾಗೂ ಶಿರ್ವ ಠಾಣಾ ಸಿಬಂದಿ ರಾಘವೇಂದ್ರ ಪಾಲ್ಗೊಂಡಿದ್ದರು.

