
ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಪ್ರಪ್ರಥಮ ಬಾರಿಗೆ ಮೊಗವೀರ ಮುಖಂಡರಾದ ನಾಡೋಜ ಜಿ ಶಂಕರ್ ಮುಂದಾಳತ್ವ ದಲ್ಲಿ ವೈಭವದ ದಸರಾ ಕಾರ್ಯಕ್ರಮ ಈಗಾಗಲೇ ಎಲ್ಲಾ ಸಿದ್ಧತೆ ನಡೆಯುತ್ತಿದ್ದೆ ದೇವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ 66 ದೀಪ ಅಲಂಕಾರ ನವದುರ್ಗೇರ ಮಂಟಪ ತಯಾರಾಗಿದ್ದು ನವ ದುರ್ಗೆಯರ ಮೂರ್ತಿ ತಯಾರಾಗುತ್ತಿದೆ. ಉಚ್ಚಿಲ – ಪಡುಬಿದ್ರಿ – ಹೆಜಮಾಡಿ ಟೋಲ್ ಗೇಟ್ ಪಡುಬಿದ್ರಿ ಕೊಪ್ಪಲಂಗಡಿ ಕ್ರಾಸ್ ವರೆಗೆ (26 ಕಿ.ಮೀ.)ಶೋಭಾಯಾತ್ರೆನಡೆಯಲಿದೆ. ಇದರಲ್ಲಿ ಹುಲಿವೇಷ, ಭಜನ ತಂಡಗಳು ವೀರ ಸಹಿತ 65ಕ್ಕೂ ಹೆಚ್ಚಿನ ಟ್ಯಾಬ್ಲೊಗಳಿದೆ ಕೊಪ್ಪಲಂಗಡಿಯಿಂದ ಕಾಪು ಬೀಚ್ ವರೆಗಿನ 4 ಕಿ.ಮೀ. ನಡಿಗೆ ಗಂಗಾರತಿ ಮಾದರಿ ಯಲ್ಲೇ 10 ಬೃಹತ್ ಮಹಾ ಮಂಗಳಾರತಿ ನಡೆಯಲಿದೆ. ದೋಣಿಗಳಲ್ಲಿ ಶಾರದಾ ಮಾತೆ, ನವದುರ್ಗೆಯರ ಪ್ರತಿಮೆಗಳನ್ನು ಸಮುದ್ರದಲ್ಲಿ ವಿಸರ್ಜಿಸುವ ಮೀನುಗಾರಿಕಾ ಬೋಟ್ ವಿದ್ಯುತ್ ದೀಪ ಅಲಂಕಾರ ಮಾಡಿ ಸಮುದ್ರದಲ್ಲಿ ಮೆರವಣಿಗ ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದಿಂದ ಆಚರಿಸಲಾಗುವುದು. ನವದುರ್ಗೆಯರಲಾಗುವುದು ಪ್ರತಿಷ್ಠೆ ಪ್ರತೀದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ ‘ಕರ್ನಾಟಕದ ಕೊಲ್ಲಾಪುರ’ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ 26ರಿಂದ ಅ. 5ರ ವರೆಗೆ ಜರಗಲಿರುವ ನವರಾತ್ರಿ ಉತ್ಸವವನ್ನು ‘ಉಚ್ಚಿಲ ದಸರಾ ಉತ್ಸವ-2022’ವಾಗಿ ಆಚರಿ ಸಲು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ನಿರ್ಧರಿಸಿದೆ ಎಂದು ದ.ಕ. ಮೊಗವೀರ ಮುಖಂಡ ರಾದ ಡಾ| ಜಿ. ಶಂಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯಸಿ ಕೋಟಿಯನ್ ಬೆಳ್ಳಂಪಳ್ಳಿ ಮಾತನಾಡಿ ದೇವಸ್ಥಾನದ ಪಕ್ಕದಲ್ಲಿ 1.70 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಶಾಲಿನಿ ಡಾ/ ಜಿ ಶಂಕರ್ ತೆರೆದ ಸಭಾಂಗಣದ ಲೋಕಾರ್ಪಣೆ ಸೆಪ್ಟೆಂಬರ್ 26ರಂದು ನಡೆಯಲಿದೆ ಅಲ್ಲಿಯೇ ನವ ದುರ್ಗೆರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠೆ ನಡೆಯಲಿದೆ ಎಲ್ಲಾ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ ದೇವಸ್ಥಾನದ ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯಾನ್ ಮಾತನಾಡಿ ಎಲ್ಲಾ ತಯಾರಿ ನಡೆದಿದ್ದು ಸಂಭ್ರಮದ ದಸರಾ ವೈಭವದಲ್ಲಿ ಎಲ್ಲರು ಭಾಗವಹಿಸಬೇಕು ತಾಯಿ ಮಹಾಲಕ್ಷ್ಮಿ ಸನ್ನಿಧಾನದಲ್ಲಿ ನಡೆಯುವ ಎಲ್ಲಾ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್ ಮಹಿಳಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಪ್ಪಿ ಸಾಲಿಯಾನ್
ಈ ಸಂದರ್ಭ ಉಪಸ್ಥಿತಿ ಇದ್ದರು

