×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿಯಲ್ಲಿ ಪಡುಬಿದ್ರಿ ವೃತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ

ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಣದಲ್ಲಿ ಬುಧವಾರ ಪಡುಬಿದ್ರಿ ವ್ರೃತ ಮಟ್ಟದ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳ ಕ್ರೀಡಾ ಕೂಟವನ್ನು ರಾಷ್ಟ್ರ ಮಟ್ಟದ ಕ್ರೀಡಾ ಪಟು ಪ್ರಕಾಶ್ ಶೆಟ್ಟಿಯವರು ಉಧ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಧ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸರಕಾರ ಹೆಚ್ಚಿನ ಅವಕಾಶ ನೀಡಿದೆ. ಕ್ರೀಡಾ ಪ್ರತಿಭೆಗಳು ತಮ್ಮ ಕ್ರೀಡಾ ಮನೋಭಾವನ್ನು ಮೊಟಕು ಗೊಳಿಸದೆ ಸೂಕ್ತ ತರಭೇತಿ ಪಡೆದು ಮುಂದುವರಿಸುವ ಬೇಕೆಂದು ಪ್ರಕಾಶ್ ಶೆಟ್ಟಿ ಕಿವಿಮಾತನ್ನು ಹೇಳಿದ್ದಾರೆ. ಕಾರ್ಯ ಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರAಗ ಕರ್ಕೇರಾ. ವಿದ್ಯಾಂಗ ಇಲಾಖಾ ಅಧಿಕಾರಿ ಶಂಕರ್ ಸುವರ್ಣ, ಕ್ರೀಡಾ ಇಲಾಖೆಯ ಗೋಪಾಲ ಶೆಟ್ಟಿ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಜೀಜ್, ಶೇಖರ ಹೆಜ್ಮಾಡಿ, ಶಶಿಕಾಂತ್ ಪಡುಬಿದ್ರಿ ಸುಧೀರ್ ಕರ್ಕೇರ ಹೆಜಮಾಡಿ  ವಿವಿಧ ಶಾಲಾ ಶಿಕ್ಷಕರು ಹಾಗೂ ವಿಧ್ಯಾರ್ಥಿ ಗಳು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *