ಉಡುಪಿಯ ಕರಾವಳಿ ಬೈಪಾಸ್‌ನಿಂದ ಅಂಬಲಪಾಡಿಗೆ ಹೋಗುವ ರಸ್ತೆ ಮದ್ಯೆ ರಾ.ಹೆ 66 ರಲ್ಲಿ 3 ಕಾರು ಹಾಗೂ ಒಂದು ಲಾರಿ ನಡುವೆ ನಡೆದ ಸರಣಿ ಅಪಘಾತದಲ್ಲಿ ಮಗು ಮತ್ತು ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತಕ್ಕೆ ಒಳಗಾದ 3 ಕಾರುಗಳ ಪೈಕಿ ಒಂದು ಕಾರು ನೋಂದಣಿಯಾಗದ ಹೊಚ್ಚಹೊಸ ಕಾರು ಆಗಿದ್ದು, ಅಪಘಾತದ ರಭಸಕ್ಕೆ ಹೊಸ ಕಾರು ನಜ್ಜುಗುಜ್ಜಾಗಿದೆ.ಹಾಗೂ ಇತರ ಎರಡು ಕಾರು ಹಾಗೂ ಲಾರಿಗೂ ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ

