×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನಿದ್ದೆಯ ಮಂಪರಿನಲ್ಲೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಬಗ್ಗೆ ಕನವರಿಸುತ್ತಿರುವ ನಮ್ಮ ದೇಶದ ಹಾಗೂ ರಾಜ್ಯದ ಬಿಜೆಪಿ ನಾಯಕರುಗಳು : ರಮೇಶ್ ಕಾಂಚನ್.

ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಂತಹ ಮತದಾರರೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರೆಂಟಿಯ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಅವರಿಗೆ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆ ಹಾಗೂ ಗ್ಯಾರಂಟಿಯನ್ನು ಖಂಡಿತವಾಗಿಯೂ ನೀಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಈ ಲಂಚಕೋರ ಹಾಗೂ ಸುಳ್ಳುಗಳ ಭರವಸೆಯನ್ನು ನೀಡಿದಂತಹ ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಯ ಬಗ್ಗೆ ಯೋಚನೆ ಆಗಿದೆ ಏಕೆಂದರೆ ನಾವು ಈ ಗ್ಯಾರೆಂಟಿಯನ್ನು ಅನುಷ್ಠಾನಕ್ಕೆ ತಂದಾಗ ರಾಜ್ಯದಲ್ಲಿ ಬಿಜೆಪಿ ಕಣ್ಮರೆಯಾಗೋದು ಸಹಜ ಅದಕ್ಕಾಗಿ ಈ ಬಿಜೆಪಿ ನಾಯಕರುಗಳು ನಿದ್ದೆಯಲ್ಲಿ ಕೂಡ ನಮ್ಮ ಗ್ಯಾರಂಟಿ ಯ ಬಗ್ಗೆ ಕನವರಿಸುತ್ತಾ ಇರುತ್ತಾರೆ ಎಂದು ರಮೇಶ್ ಕಾಂಚನ್ ಅವರು ತಿಳಿಸಿದರು. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ತಾವು ಅಧಿಕಾರಕ್ಕೆ ಬರುವ ಮೊದಲು ವಿದೇಶಿ ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಕಪ್ಪು ಹಣ ನಮ್ಮ ಭಾರತೀಯರಿಗೆ ಸೇರಿದ್ದು ಅದನ್ನು ಕೇವಲ 100 ದಿನದಲ್ಲಿ ವಾಪಸ್ ತಂದು ದೇಶದ ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ, ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, 2022ರ ಒಳಗೆ ಪ್ರತಿ ಒಬ್ಬ ಭಾರತೀಯನಿಗೆ ಮನೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿ ಅಧಿಕಾರವನ್ನು ಅನುಭವಿಸುತ್ತ ಇಂದಿಗೆ 108 ತಿಂಗಳು ಕಳೆದರು ಒಂದು ಭರವಸೆಯನ್ನು ಕೂಡ ಯಾವುದೇ ಭಾರತೀಯನಿಗೆ ತಲುಪಿಸಲಿಲ್ಲ ಎಂಬುದು ಬಿಜೆಪಿಯ ನಾಯಕರಿಗೆ ತಿಳಿದಿರಲಿ. ಸುಳ್ಳು ಹೇಳಿ ಜನಸಾಮಾನ್ಯರನ್ನು ಲೂಟಿ ಮಾಡುವುದೇ ಬಿಜೆಪಿಯ ನಾಯಕರುಗಳ ಕಾಯಕವಾದರೆ ಕೊಟ್ಟ ಭರವಸೆ ಹಾಗೂ ಗ್ಯಾರಂಟಿಯನ್ನು ನೀಡಿ ಜನಸಾಮಾನ್ಯರನ್ನು ಉದ್ದಾರ ಮಾಡುವುದೇ ಕಾಂಗ್ರೆಸ್ ಪಕ್ಷದ ಕೆಲಸವಾಗಿದೆ. ಈ ಹಿಂದೆಯೂ ಕೂಡ ನುಡಿದಂತೆ ನಡೆದಿದ್ದೇವೆ ಮುಂದೆಯೂ ನುಡಿದಂತೆಯೇ ನಡೆಯುತ್ತೇವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಬಿಜೆಪಿಯ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *