
16 04 2023 ರ ಆದಿತ್ಯವಾರ *ನವೋದಯ ಕಲಾವೃಂದ (ರಿ) ಪಲಿಮಾರು. ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಲಿಮಾರು. ಶ್ರೀ ಮಹದೇಶ್ವರ ಭಜನಾ ಮಂದಿರ (ರಿ.)ಪಲಿಮಾರು ಇವರ ಜಂಟಿ ಆಶ್ರಯದಲ್ಲಿ ನಮ್ಮ ಪಲಿಮಾರು ಸ್ವಚ್ಛ ಪಲಿಮಾರು ಎಂಬ ಸ್ವಚ್ಛತಾ ಅಭಿಯಾನ ನಡೆಸಲಾಯಿತು.ಈ ಸಂದರ್ಭದಲ್ಲಿ ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಅಡ್ವೆ ಶ್ರೀ ಮಹಾಗಣಪತಿ ದೇವಸ್ಥಾನದವರೆಗೆ ಸ್ವಚ್ಛತೆ ಮಾಡಲಾಯಿತು.ನವೋದಯ ಕಲಾವೃಂದ (ರಿ) ಸಂಸ್ಥೆಯ ಗೌರವ ಅಧ್ಯಕ್ಷರಾದ ದಿನೇಶ್ ಪ್ರಭು ಪಲಿಮಾರು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ, ಅಧ್ಯಕ್ಷ ಅಶೋಕ್ ದೇವಾಡಿಗ, ಹೊಯಿಗೆ ಫ್ರೆಂಡ್ಸ್ ನ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಮಹದೇಶ್ವರ ಭಜನಾ ಮಂದಿರದ ಅಧ್ಯಕ್ಷ ರಾದ ಸುಧಾಕರ ಪಲಿಮಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಲಿಮಾರು ಇದರ ಅಧ್ಯಕ್ಷರಾದ ಯೋಗೀಶ್ ಸುವರ್ಣ , ಹಾಗೂ ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು .ಇದೇ ಸಂದರ್ಭದಲ್ಲಿ ಪಲಿಮಾರಿನ ಆಯ್ದ ಪ್ರದೇಶಗಳಲ್ಲಿ ಸ್ವಚ್ಛತಾ ಸಂದೇಶ ಸಾರುವ ನಾಮಫಲಕಗಳನ್ನು ನೆಡಲಾಯಿತು

