×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಚ್ಚಿಲ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮೀನುಗಾರರಿಗೆ ಪ್ರತ್ಯೇಕ ಇಲಾಖೆ – ರಾಹುಲ್ ಗಾಂಧಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಮತ್ತು 25 ರೂಪಾಯಿ ಸಬ್ಸಿಡಿಯೊಂದಿಗೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ  ಮೀನುಗಾರರಿಗೆ ಪ್ರತ್ಯೇಕ ಇಲಾಖೆ ಎಂದು  ರಾಹುಲ್ ಗಾಂಧಿ ಹೇಳಿದರು. ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ದಲ್ಲಿ ಆಯೋಜಿಸಲಾಗಿದ್ದ ಮೀನುಗಾರರೊಂದಿಗಿನ‌ ಸಂವಾದ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು‌. ಮೀನುಗಾರರು‌ ಅನೇಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಿಎಸ್‌ಟಿ ಡೀಸೆಲ್ ಬೆಲೆ ಏರಿಕೆ ಎಲ್ಲಾ ಸಮಸ್ಯೆ ಆಗಿರುವುದು ಅರಿವಿದೆ. ನಮ್ಮ ಸರ್ಕಾರ ಬರುತ್ತಿದ್ದಂತೆ‌ ಖಚಿತ ಯೋಜನೆ ರೂಪಿಸುತ್ತೇವೆ. ನೀವು ಕೂಡ ರೈತರಂತೆ ದುಡಿಯುವವರು.ತಾವು ಸಮುದ್ರದಲ್ಲಿ ಕೃಷಿ ಮಾಡುತ್ತೀರಿ. ಕೃಷಿ ರೈತರಿಗೆ ಸಿಗುವ ರಕ್ಷಣೆ ಮೀನುಗಾರರಿಗೂ ಸಿಗುತ್ತೆ. ಹಣವಂತ ಮೀನುಗಾರರ ಜೊತೆ ಬಡ ಮೀನುಗಾರರಿಗೆ ಹೋರಾಟ ಮಾಡಲು ಸಾಧ್ಯವಿಲ್ಲ.ಸಣ್ಣ ಮೀನುಗಾರರು ಸಾಯುತ್ತಿದ್ದರೆ, ದೊಡ್ಡ ಮೀನುಗಾರರು ಹಣ ಮಾಡುತ್ತಿದ್ದಾರೆ.ನಿಮ್ಮ ರಿಸ್ಕ್ ಬಗ್ಗೆ ನಮಗೆ ಗಂಭೀರತೆ ಇದೆ. ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗಾಗಿ ಈಗಾಗಲೇ ನಾಲ್ಕು ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದ್ದು, ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಗ್ಯಾರಂಟಿ ಕಾರ್ಡ್ ನಲ್ಲಿ ಘೋಷಿಸಿರುವ ನಾಲ್ಕು ಘೋಷಣೆಗಳನ್ನು ಪೂರ್ಣಗೊಳಿಸಲು ನಾವು ಬದ್ಧರಿದ್ದೇವೆ‌‌ ಎಂದು ತಿಳಿಸಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಹಣಬಲ ಮತ್ತು ತೋಳ್ಬಲದ ಮೂಲಕವಾಗಿ ಅಧಿಕಾರಕ್ಕೆ ಬಂದಿದ್ದು ಅದಕ್ಕಾಗಿಯೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ಅಧಿಕಾರಕ್ಕೆ ಬಂದ ಕೂಡಲೇ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಜನರ ಮನಸ್ಸು ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದರು. ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ಕಾಂಚನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌, ಉಡುಪಿ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು, ಎಂ ಎ ಗಫೂರ್  ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಮಂಜುನಾಥ ಸುಣೇಗಾರ್, ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಚಂದ್ರ, ದೀಪಕ್ ಕೋಟ್ಯಾನ್, ವಿಶ್ವಾಸ ಅಮೀನ್, ಗೀತಾ ವಾಗ್ಲೆ, , ಸಂತೋಷ್ ಕುಲಾಲ್, ನವೀನ್ ಚಂದ್ರ ಸುವರ್ಣ ನವೀನ್ ಚಂದ್ರ ಶೆಟ್ಟಿದೇವಿ ಪ್ರಸಾದ್ ಶೆಟ್ಟಿ  ದಿವಾಕರ್ ಶೆಟ್ಟಿ ಸರ್ಪುದ್ದೀನ್ ಶೇಕ್ ಹರೀಶ್ ನಾಯಕ್ ರಮೀಜ್ ಹುಸೇನ್ ಅಮೀರ್ ಕಾಪು ಆಸಿಫ್ ಹನ್ನನ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *