
ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ೬೬ ರ ಭವ್ಯ ಪೆಟ್ರೋಲ್ ಬಂಕ್ ಬಳಿ ಅಂಡರ್ ಗ್ರೌಂಡ್ ಕೆಲಸ ನಿಮಿತ್ತ ನೆಲ ಅಗೆಯುತ್ತಿದ್ದ ವೇಳೆ ಭೂಮಿಯ ಅಡಿಯಲ್ಲಿ ಹಾದುಹೋಗುತ್ತಿದ್ದ ಹೈ ಟೆನ್ಷನ್ ತಂತಿಗೆ ನೆಲ ಅಗೆಯುವ ಕಬ್ಬಿಣದ ಸಾಧನ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಮದ್ಯಾಹ್ನ ಸಂಭವಿಸಿದೆ. ಮ್ರತ ದುರ್ದೈವಿ ಬಾಗಲಕೋಟೆ ಮೂಲದ ಲಿಂಗ ರಾಜು(21) ಎಂದು ತಿಳಿದು ಬಂದಿದೆ. ಪಡುಬಿದ್ರಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

