×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶ್ರೀರಾಮ್ ಫೈನಾನ್ಸ್ ವತಿಯಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಉಡುಪಿಯ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡುತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ.ಶ್ರೀರಾಮ ಫೈನಾನ್ಸ್ ನ ಸಂಸ್ಥಾಪಕ ತ್ಯಾಗರಾಜನ್ ಅವರ ಜೀವನ ಮೌಲ್ಯ, ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. . 1 ಲಕ್ಷ ರೂಪಾಯಿಯಲ್ಲಿ ಆರಂಭಿಸಿದ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಇಂದು ಎರಡೂವರೆ ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.ಶ್ರೀರಾಮ್ ಫೈನಾನ್ಸ್ ನೀಡುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಓದಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು ಎಂ.ಎ.ಗಫೂರ್, ಬಿಲ್ಲವ ಮುಖಂಡ ಮಾಧವ ಬನ್ನಂಜೆ, ಶ್ರೀರಾಮ್ ಫೈನಾನ್ಸ್ ನ ಕಾನೂನು ಸಲಹೆಗಾರ ಉಲ್ಲಾಸ್ ನಾಯಕ್, ಶ್ರೀರಾಮ್ ಫೈನಾನ್ಸ್ ನ ನಾಗರಾಜ್ ಬಿ., ಗಣಪತಿ ನಾಯಕ್, ದಿನೇಶ್ ನಾಯ್, ಸುರೇಶ್ ಶೆಟ್ಟಿ, ಉಡುಪಿ ಶಾಖಾಧಿಕಾರಿ ಸಂದೀಪ್, ಕಾರ್ಕಳ ಶಾಖಾಧಿಕಾರಿ ವಿಕೇಶ್ ಸುವರ್ಣ, ಕುಂದಾಪುರ ಶಾಖಾಧಿಕಾರಿ ರಘು ಮಡಿವಾಳ ಉಪಸ್ಥಿತರಿದ್ದರು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ವಿಭಾಗೀಯ ಅಧಿಕಾರಿ ಸದಾಶಿವ ಅಮೀನ್ ಕಟ್ಟೆಗುಡ್ಡೆ ಸ್ವಾಗತಿಸಿ, ದಯಾನಂದ ಕರ್ಕೆರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *