×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 55 ಕುಟುಂಬಗಳಿಗೆ 94/C ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರ – ಶಾಸಕ ರಘುಪತಿ ಭಟ್ ವಿತರಣೆ

ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ 55 ಕುಟುಂಬಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಇಂದು ದಿನಾಂಕ 21-03-2023 ರಂದು ಉಪ್ಪೂರು ಗ್ರಾಮದ ಗೆಳೆಯರ ಬಳಗದ ವಠಾರದಲ್ಲಿ ವಿತರಿಸಿದರು. ಉಪ್ಪೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರು ಈ ಕುಟುಂಬಗಳಿಗೆ ಗೋಮಾಳದ ಸಮಸ್ಯೆಯಿಂದಾಗಿ ಹಕ್ಕುಪತ್ರ ನೀಡಲು ಸಮಸ್ಯೆ ಉಂಟಾಗಿರುತ್ತದೆ. ವಿಶೇಷ ಪ್ರಕರಣಗಳ ಅಡಿ ಗೋಮಾಳವನ್ನು ವಿರಹಿತಗೊಳಿಸಿ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಜು ಪೂಜಾರಿ, ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್, ಗ್ರಾಮ ಲೆಕ್ಕಾಧಿಕಾರಿಗಳಾದ ಚಂದ್ರ ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *