
ಉದ್ಯಾವರ ಮಠದಕುದ್ರುವಿನ ಪಾಪನಾಶಿನಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಅದಮಾರು ಮಠದ ಸ್ವಾಮೀಜಿ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿ ಭಾಸ್ಕರ್ ಕರ್ಕೇರಾ ಎಂಬುವವರ ಸ್ಕೂಟರ್‌ನ್ನು ದುಷ್ಕರ್ಮಿಗಳು ಹಾನಿಗೈದಿದ್ದಾರೆ. ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿ ಕರೆದು ಅಕ್ರಮ ಮರಳು ಮಾಫಿಯಾದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಭಾಸ್ಕರ್ ಕರ್ಕೇರಾ ಹಾಜರಿದ್ದರು ಎಂಬ ಕಾರಣಕ್ಕೆ, ಅವರು ತಮ್ಮಮನೆಯ ಸಮೀಪ ನಿಲ್ಲಿಸಿದ್ದ ಸ್ಕೂಟರನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ ಎಂದು ಭಾಸ್ಕರ ಭಾಸ್ಕರ್ ಕರ್ಕೇರಾ ಹಾಜರಿದ್ದರು ಎಂಬ ಕಾರಣಕ್ಕೆ, ಅವರು ತಮ್ಮಮನೆಯ ಸಮೀಪ ನಿಲ್ಲಿಸಿದ್ದಸ್ಕೂಟರನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ ಎಂದು ಭಾಸ್ಕರ ಕರ್ಕೇರಾ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

