×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯ ಮೃತದೇಹ ಕಾಪು ಬೀಚ್ ನಲ್ಲಿ ಪತ್ತೆ

ಕಾಪು : ಟ್ಯೂಬ್ ಮೂಲಕ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸೆರೆಯ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಬುಧವಾರ ಉಳಿಯಾರಗೋಳಿ ಕಡಲ ಕಿನಾರೆಯಲ್ಲಿ ನಡೆದಿದ್ದು .ಗುರುವಾರ ಮಧ್ಯಾಹ್ನ 3:00 ಸುಮಾರಿಗೆ ಕಾಪು ಬೀಚ್ ಬಳಿ ಮೃತ ದೇಹ ಪತ್ತೆಯಾಗಿದೆ ಉಳಿಯಾರಗೋಳಿ ಯಾರ್ಡ್ ಬಳಿಯ ನಿವಾಸಿ ಸಂತೋಷ್ (47) ಮೀನುಗಾರಿಕೆಗೆ ತೆರಲಿ ಮೃತಪಟ್ಟ ಯುವಕ ಸಾಂಪ್ರದಾಯಿಕ ರೀತಿಯಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ಸಂತೋಷ್ ಬುಧವಾರ ಸಂಜೆ 5 ಗಂಟೆಯ ವೇಳೆಗೆ ಟ್ಯೂಬ್ ಧರಿಸಿಕೊಂಡು ಮೀನುಗಾರಿಕೆಗೆ ತೆರಳಿದ್ದು, ಬಲೆ ಬೀಸಿ ವಾಪಸ್ಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಮಲ್ಪೆಯ ಮುಳುಗುತಜ್ಞ ಈಶ್ವರ್ ಮತ್ತು ಅವರ ಸಂಗಡಿಗರು ಮತ್ತು ಸೂರಿ ಕಾಪು ಸ್ಥಳೀಯರು ಸಮುದ್ರದಿಂದ ಮೇಲಕ್ಕೆ ತ್ತಲು ಸಹಕರಿಸಿದ್ದಾರೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Leave a Reply

Your email address will not be published. Required fields are marked *