
ಕಾಪು ತಾಲೂಕಿನ ಭಂಟಕಲ್ಲು ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳ ಪಧಗ್ರಹಣ ಮತ್ತು ಶೋಷಿತ ಸಮೂದಾಯಗಳ ಜಾಗೃತಿ ಸಮಾವೇಶ ಇದೇ ಫೆಬ್ರವರಿ 19 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ಅವರು… ಪ್ರಜಾಪ್ರಭುತ್ವದ ಮೂಲ ಉದ್ದೇಶ ಮತ್ತು ಮೂಲ ತತ್ವವನ್ನೇ ನೆಲಸಮ ಮಾಡಿ ಅಧಿಕಾರ ನಡೆಸುತ್ತಿರುವ ಮನುವಾದಿ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕರೆಕೊಟ್ಟರು. ಯಾವುದೇ ಅಭಿವೃದ್ಧಿ ಮಾಡದೇ , ಇದ್ದ ಸರಕಾರಿ ಸಂಸ್ಥೆಗಳನ್ನೆಲ್ಲಾ ಖಾಸಗೀಕರಣ ಗೊಳಿಸುತ್ತಾ …ಪರೋಕ್ಷವಾಗಿ ಮೀಸಲಾತಿಗೆ ಎಳ್ಳು ನೀರು ಬಿಡುವ ಕಾಯಕ ಮಾಡುತ್ತಿರುವ ಕೋಮುವಾದಿ ಪ್ರಭುತ್ವವನ್ನು ಈ ದೇಶದ ಮೂಲನಿವಾಸಿಗಳು ಮೂಲೆಗುಂಪು ಮಾಡಬೇಕು ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಶ್ಯಾಮರಾಜ್ ಬಿರ್ತಿ ಯವರು ಈ ದೇಶದ ಮೂಲನಿವಾಸಿಗಳಾದ ನಮ್ಮನ್ನು ಅಂದು ಮೋಸಮಾಡಿ ದೇಶದೊಳಗೆ ನುಗ್ಗಿದ ಪರಕೀಯ ಆರ್ಯರು ಇಂದೂ ಸಹ ಮೋಸದಿಂದಲೇ ಅಧಿಕಾರಕ್ಕೆ ಬಂದು ನಮ್ಮನ್ನು ಆಳುತ್ತಿದ್ದಾರೆ …….ಅವರು ಸಂವಿಧಾನ ವಿರೋಧಿಗಳು , ಸಂವಿಧಾನವನ್ನು ಬದಲಾಯಿಸುವುದೇ ಅವರ ಗುರಿ…ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಕುಂದುಬರದಂತೆ ನಾವು ರಕ್ಷಣೆಗೆ ನಿಲ್ಲಬೇಕು ಎಂದರು.
ಕಾರ್ಯಕ್ರಮವನ್ನು ಶಂಕರ ಪದಕಣ್ಣಾಯ ಉಧ್ಘಾಟಿಸಿದರು. ಮುಖ್ಯ ಭಾಷಣ ಕಾರರಾದ ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್ ನ ಜಯಕುಮಾರ್ ಹಾದಿಗೆ ಮಾತನಾಡಿ ನಾವು ಅಂಬೇಡ್ಕರ್ ರವರ ಆಶಯಗಳನ್ನು ಇಡೇರಿಸುವ ಕಾರ್ಯ ಮಾಡಬೇಕು ಎಂದರು.ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಪ್ರಧಾನ ಸಂಚಾಲಕರಾದ ಶ್ರೀ. ವಿಠಲ ಉಚ್ಚಿಲ , ವಿಧ್ಯಾರ್ಥಿ ವಕ್ಕೂಟದ ರಾಜ್ಯ ಸಂಚಾಲಕರಾದ ಎಸ್.ಎಸ್.ಪ್ರಸಾಧ್ , ಮಹಿಳಾ ಸಂಚಾಲಕಿ ವಸಂತಿ ಶಿವಾನಂದ , ದಲಿತ ನೌಕರರ ವಕ್ಕೂಟದ ಸಂಚಾಲಕರಾದ ರಾಘವೇಂದ್ರ ಬೆಳ್ಳೆ , ವಕೀಲರಾದ ಮಂಜುನಾಥ್. ವಿ. , ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ. ರತನ್ ಕುಮಾರ್ ಶೆಟ್ಟಿ , ಶಿರ್ವ ಪೋಲಿಸ್ ಉಪ ನೀರೀಕ್ಷರಾದ ಶ್ರೀ. ರಾಘವೇಂದ್ರ .ಸಿ., ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಭಾಸ್ಕರ್ ಮಾಸ್ಟರ್ , ಪರಮೇಶ್ವರ ಉಪ್ಪೂರು , ಅಣ್ಣಪ್ಪ ನಕ್ರೆ , ಗೋಪಾಲಕ್ರಷ್ಣ ಕುಂದಾಪುರ , ಉಡುಪಿ ತಾಲೂಕು ಪ್ರಧಾನ ಸಂಚಾಲಕರಾದ ಶ್ರೀ. ಶಂಕರ್ ದಾಸ್ ಚೆಂಡ್ಕಳ ಉಪಸ್ಥಿತರಿದ್ದರು. ಉಮೇಶ ಭಂಟಕಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು

