
ಇಂದಿನಿಂದ ಫೆಬ್ರವರಿ 23 ರಿಂದ 26ರ ವರೆಗೆ ಉಪ್ಪೂರಿನ ಮಡಿಸಾಲು ನದಿಯಲ್ಲಿ ಆಯೋಜಿಸಿದ 11ನೇ ರಾಷ್ಟ್ರೀಯ ಮಟ್ಟದ “ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್” ಗೆ ಇಂದು ದಿನಾಂಕ 23-02-2023 ರಂದು ಗಣ್ಯರೊಂದಿಗೆ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲೆ ಮತ್ತು ಭಾರತೀಯ ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಈ “ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್” ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಎಚ್. ಎಸ್ ಬಲ್ಲಾಳ್, ಭಾರತೀಯ ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರಶಾಂತ್ ಕುಶ್ವಾಹಾ, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಮೇಜರ್ ಜನರಲ್ ಎಂ.ಎನ್ ದೇವಯ್ಯ, ಕಾರ್ಯದರ್ಶಿಗಳಾದ ದಿಲೀಪ್ ಕುಮಾರ್, ಭಾರತೀಯ ಡ್ರ್ಯಾಗನ್ ಬೋಟ್ ತಂಡದ ನಾಯಕರಾದ ಮಂಜೀತ್ ಸಿಂಗ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ, ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಡ್ರ್ಯಾಗನ್ ಬೋಟ್ ಪಂದ್ಯಾವಳಿಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿರ್ತಿ ರಾಜೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹಾಕೆ ಅಕ್ಷಯ್ ಮಚ್ಚಿಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

