×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ ಶಾಲಾ ಕೊಠಡಿ ನಿರ್ಮಾಣಕ್ಕೆ ತೆಂಗಿನ ಮರಗಳ ಮಾರಣಹೋಮ; ಆಕ್ರೋಶ

ಹೆಜಮಾಡಿಯ ಸರಕಾರಿ ಪ್ರೌಢಶಾಲಾ ಅವರಣದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಎರಡು ತೆಂಗಿನ ಮರಗಳ ಮಾರಣಹೋಮ; ಆಕ್ರೋಶ  ಹೆಜಮಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಪ್ರೌಢಶಾಲಾ ವಿಭಾಗಕ್ಕೆ ವಿವೇಕನಂದ ಹೆಸರಿನಲ್ಲಿ ಕೊಠಡಿ ಆಗುವುದರಿದ್ದು, ಅದಕ್ಕಾಗಿ ಶಾಲೆಯ ಆವರಣದಲ್ಲಿ ಎಕ್ರೆ ಗಟ್ಟಲೆ ಜಾಗ ಇದ್ದರೂ, ಉತ್ತಮ ಫಲ ನೀಡುವ ಎರಡು ತೆಂಗಿನ ಮರಗಳನ್ನು ಮಂಗಳವಾರ ರಾತ್ರಿ ಕಡಿದು ಹಾಕಿದ್ದಾರೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯ ಶೇಕರ್ ಹೆಜ್ಮಾಡಿಯವರು ಬುಧವಾರ ಬೆಳಗ್ಗೆ ಆಕ್ರೋಶವಾಗಿ ಹೇಳಿದ್ದಾರೆ. ಶಾಲಾ ಕೊಠಡಿಗಾಗಿ ಇಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್ ರವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಶಾಲೆಗೆ ಎಕ್ಕರೆ ಗಟ್ಟಲೆ ಜಾಗ ಇದ್ದರೂ, ಮಧ್ಯದಲ್ಲಿ ಕೊಠಡಿ ಮಾಡಲು ಜಾಗ ಸೂಚಿಸಲಾಗಿದೆ. ಈ ಕಾರ್ಯವನ್ನು ನಾನು ಖಂಡಿಸುತ್ತೇನೆ ಎಂದು ಶೇಖರ್ ಹೆಜಮಾಡಿ ಹೇಳಿದ್ದಾರೆ

Leave a Reply

Your email address will not be published. Required fields are marked *