×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ : ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಭಾಗಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಸಮಿತಿ ಯ ಕಾರ್ಯಕಾರಿಣಿ ಸಭೆಯು ಕೆ.ಪಿ.ಸಿ.ಸಿ ಕಛೇರಿ ರೇಸ್ ಕೋರ್ಸ್ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು,ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ಯಲ್ಲಿ ನಡೆಯಿತು ಈ ಸಭೆಯಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಮಾತನಾಡಿ ರಾಜ್ಯದಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು ಈಗಾಗಲೇ ಪ್ರತಿ ಕುಟುಂಬಕ್ಕೂ ಮಾಸಿಕ ಕರೆಂಟ್ 200 ಯುನಿಟ್ ಉಚಿತವಾಗಿ ನೀಡುವುದು ಹಾಗೂ ಪ್ರತಿ ತಿಂಗಳು ಮನೆಯ ಹೆಣ್ಮಗಳಿಗೆ ಸಂಸಾರ ನಡೆಸಲು 2000 ರೂಪಾಯಿ ನೀಡುವುದು ಮಾಸಿಕ 10 ಕೆಜಿ ಅಕ್ಕಿ ನೀಡುವ ಬಗ್ಗೆ ಗೋಸಿಸಿರುವದು ಆರ್ಥಿಕವಾಗಿ ಬಲಗೊಳಿಸಲು ಸಾಧ್ಯವಾಗುತ್ತದೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಬಡವರ ದೀನದಲಿತರ ಪಕ್ಷ ಜಾತ್ಯತೀತ ನೆಲೆಯಲ್ಲಿ ಪ್ರತಿಯೊಬ್ಬರ ನೋವಿಗೂ ಸ್ಪಂದಿಸಿ ರಾಜ್ಯವನ್ನು ಅತ್ಯಣ್ಮುಖವಾಗಿ ನಡೆಸುವ ಪಕ್ಷ ಎಂದು ತಿಳಿಸಿದರು ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಕಾಂಗ್ರೆಸ್ ಮುಖಂಡರಾದ ಇರ್ಷಾದ್ ಬೆಂಗಳೂರು,ಅಶ್ಫಾಕ್ ಬಾಗಲಕೋಟೆ,ಅಬ್ದುಲ್ ಸಮದ್ ಹಾಸನ,ಅಬ್ದುಲ್ಲ ಶಿವಳ್ಳಿ,ಹಾಗೂ ಇನ್ನಿತರ ರಾಜ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *