ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಇಂದ್ರಾಳಿ ರೈಲ್ವೇ ಮೇಲ್ವೇತುವೆ ಕಾಮಗಾರಿ ವಿಳಂಬ ಖಂಡಿಸಿ ಏ.1ರಂದು ಎಪ್ರಿಲ್ ಫೂಲ್ ದಿನಾಚರಣೆಯೊಂದಿಗೆ ವಿಶಿಷ್ಟ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ಅಮೃತ್ ಶೆಣೈ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು. ರೈಲ್ವೇ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಸಂಸದರಾದ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಕಳೆದ 9 ವರ್ಷಗಳಿಂದ ಸೇತುವೆ ಕಾಮಗಾರಿಗೆ ದಿನಾಂಕದ ಮೇಲೆ ದಿನವನ್ನು ನಿಗದಿ ಮಾಡುತ್ತಾ ಜನರನ್ನು ಫೂಲ್ ಮಾಡಿದ್ದಾರೆ. ಹೀಗಾಗಿ ಏ.1ರಂದೇ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕಲ್ಸಂಕದಿಂದ ಇಂದ್ರಾಳಿವರೆಗೆ ಸೇತುವೆ ಮಾದರಿ ಟ್ಯಾಬ್ಲೊದೊಂದಿಗೆ ಬೃಹತ್ ಜಾಥಾ ಆಯೋಜಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಹಣದ ಕೊರತೆಯಾಗಿದ್ದರೆ ಸಮಿತಿ ಸದಸ್ಯರು ಭೀ ಬೇಡಿ ಕೇಂದ್ರ ಸರ್ಕಾರಕ್ಕೆ ಹಣವನ್ನು ಕಳುಹಿಸಿಕೊಡಲಿದ್ದಾರೆ. ಎಂದು ತಿಳಿಸಿದರು. ಸಮಿತಿ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾದ ಮಹಾಬಲ ಕುಂದರ್, ಕುಶಾಲ್ ಶೆಟ್ಟಿ, ಹರಿಪ್ರಸಾದ್ ರೈ, ಸದಸ್ಯರಾದ ಅನ್ಸಾರ್ ಅಹಮದ್, ಮೀನಾ ಬನ್ನಂಜೆ, ಅಬ್ದುಲ್ ಅಜೀಝ್ ಮೊದಲಾದವರು ಉಪಸ್ಥಿತರಿದ್ದರು.


