×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಾ.9ರಂದು ಗೋವಾದಲ್ಲಿ ಯಕ್ಷಶರಧಿ…!

ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗೋವಾ ಪಣಜಿಯ ಕನ್ನಡ ಸಮಾಜದ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಯಕ್ಷಗಾನ ಪ್ರದರ್ಶನವನ್ನೊಳಗೊಂಡ ‘ಯಕ್ಷ ಶರಧಿ’ ಕಾರ್ಯಕ್ರಮ ಮಾ.9ರಂದು ಗೋವಾದ ಮೆನೆಜೆಸ್ ಭ್ರಗಾಂಜ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಗೋವಾ ಬಂಟ್ಸ್ ಸಂಘ ಮತ್ತು ವಿಮಾ ಸರ್ವೆಯರ್ ಮಡಗಾಂವ್ ಇದರ ಕಾರ್ಯದರ್ಶಿ ಸುನೀಲ್ ಶೆಟ್ಟಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ವಹಿಸುವರು. ಪತ್ರಕರ್ತ ಎ.ಜಿ.ಶಿವಾನಂದ ಭಟ್ ಹಾಗೂ ಗೋವಾ ವಿವಿಯ ಸಮಾಜ ಶಾಸ್ತç ಪ್ರಾಧ್ಯಾಪಕ ಡಾ.ಗಣೇಶ್ ಸೋಮಯಾಜಿ ಉಪಸ್ಥಿತರಿರುವರು. ಯಕ್ಷ ಸಾಹಿತ್ಯ ಸಾಂಗತ್ಯ ವಿಚಾರ ಸಂಕಿರಣದಲ್ಲಿ ಅರ್ಥಧಾರಿ ಅಜಿತ ಕಾರಂತ ಬೆಂಗಳೂರು ಇವರು ವಿಚಾರ ಮಂಡಿಸಲಿದ್ದಾರೆ. ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ `ಶರಸೇತು ಬಂಧನ ‘ ಹಾಗೂ ಹಳುವಳ್ಳಿ ಶ್ರೀ ಸುಬ್ರಹ್ಮಣೇಶ್ವರ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ‘ಸುಧಾನ್ವಾರ್ಜುನ ‘ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *