×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಸ್ಸಿನಿಂದ ಬಿದ್ದು ವಿದ್ಯಾರ್ಥಿ ಸಾವು

ಕುಂದಾಪುರ ತಾಲೂಕು ಹೆಮ್ಮಾಡಿ ಜಂಕ್ಷನ್ ಬಲಿ ರಾಷ್ಟ್ರೀಯ ಹೆದ್ದಾರಿ 66ರ ಬಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಂದಾಪುರದ ಕಡೆಗೆ ಏಕಾಏಕಿ ತಿರುಗಿಸಿದಾಗ ಬಸ್ಸಿನ ಮುಂಭಾಗದ ಡೋರ್ ಬಳಿಯಿದ್ದ ವಿದ್ಯಾರ್ಥಿ  ಸುದೀಪ್  ರಸ್ತೆಗೆ ಬಿದ್ದು ಬಸ್ಸಿನ ಮುಂಭಾಗದ ಚಕ್ರಕ್ಕೆ ಸಿಲುಕಿ ಚಕ್ರವು ಸೊಂಟದ ಮೇಲೆ ಹಾದು ಹೋಗಿದ್ದು ನಂತರ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆ ವೈದ್ಯರು ಸುದೀಪ್ ನನ್ನು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ. ಬಸ್‌ ನಿರ್ವಾಹಕ  ಬಸ್‌ ನಿರ್ವಾಹಕನಾಗಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ  ಇರುವುದರಿಂದ ಬಸ್ ಪ್ರಯಾಣಿಕನಾದ ಸುದೀಪ್ ಬಸ್ಸಿನ ಮುಂಭಾಗದ ಡೋರ್ ನಿಂದ ಎಸೆದು ರಸ್ತೆಗೆ ಬಿದ್ದು ಮೃತಪಡಲು ಕಾರಣವಾಗಿರುವುದಾಗಿದೆ ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *