×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಂಡತೀರ್ಥ: ಪ್ರಾರಂಭೋತ್ಸವ

ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯಲ್ಲಿ ಶಾಲೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಲಾಯಿತು.ಬಳಿಕ
ಸಂಚಾಲಕರಾದ ಡಾl ಪ್ರಶಾಂತ್ ಶೆಟ್ಟಿಯವರು ಮಾತನಾಡಿ ಈ ವರ್ಷವೂ ಕೂಡಾ  ಶಾಲೆಗೆ  ಒಳ್ಳೆಯ ಫಲಿತಾಂಶ ಬಂದಿದ್ದು ಇದರಿಂದಾಗಿ ನೂರಾರು ಹೊಸ ವಿದ್ಯಾರ್ಥಿಗಳು ಈ ಶಾಲೆಗೆ ಸೇರ್ಪಡೆಗೊಂಡಿರುವುದು ಸಂತೋಷದ ವಿಚಾರ. ಇಂದು ವಿದ್ಯಾರ್ಥಿಗಳು ರಜೆಯ ವಾತಾವರಣದಿಂದ ಮುಕ್ತರಾಗಿ ಶಾಲೆಗೆ ಆಗಮಿಸುವಾಗ ಬದಲಾವಣೆಯ ವಾತಾವರಣ ಸೃಷ್ಟಿಯಾದಲ್ಲಿ ಅವರ ಕಲಿಕೆಗೆ ಪ್ರೇರಣೆ ಸಿಗುತ್ತದೆ.ಹಾಗೂ ಹೊಸ ಶೈಲಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.ಈ ಸುಂದರ ವಾತಾವರಣಕ್ಕೆ ಕಾರಣರಾದ ಹೆತ್ತವರಿಗೆ ,ಮಕ್ಕಳಿಗೆ,ಶಿಕ್ಷಕರಿಗೆ,ಹಾಗೂ ಶಾಲೆಯ ಮುಖ್ಯಸ್ಥರಿಗೆ ಅಭಿನಂದನೆಯನ್ನು ಸಲ್ಲಿಸಿದರು.
  ಶಾಲಾ ಆಡಳಿತ ಮಂಡಳಿಯ ಸದಸ್ಯೆ ಡಾ ll ಪನ್ನ ಪಿ ಶೆಟ್ಟಿ ಯವರು ಕೂಡ ಕಾರ್ಯಕ್ರಮದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
   ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನೀಲಾನಂದ ನಾಯ್ಕ್,ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್,ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಕನ್ನಡ ಮಾಧ್ಯಮದ ಮುಖ್ಯಸ್ಥೆ ಕೃಪಾ ಅಮ್ಮನ್ನ ,ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮಿ ರಾವ್,ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ್ ಶೆಟ್ಟಿ,ಶಿಕ್ಷಕರು,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *