×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ತಾಲ್ಲೂಕು ವತಿಯಿಂದ 74ನೇ ಗಣರಾಜ್ಯೋತ್ಸವ ಆಚರಣೆ

ಕಾಪು ತಾಲ್ಲೂಕು ವತಿಯಿಂದ 74ನೇ ಗಣರಾಜ್ಯೋತ್ಸವ ಕಾರ್ಯವನ್ನು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸಕಲ ಪೋಲಿಸ್ ಗೌರವದೊಂದಿಗೆ ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ ಧ್ವಜಾರೋಹಣ ಗೈದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಗಣರಾಜ್ಯೋತ್ಸವ ಕಾರ್ಯದಲ್ಲಿ ಭಾಗವಹಿಸಲು ತುಂಬಾ ಹೆಮ್ಮೆಯೆನಿಸುತ್ತದೆ. ದೇಶದ ಬಗ್ಗೆ ಹೆಮ್ಮೆ ಪಡುವುದಕ್ಕಿಂತ ದೇಶವೇ ನಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ ಹಲವು ಮಹನೀಯರು ಗಳನ್ನು ನೆನಪು ಮಾಡಬೇಕಾದ ಸಮಯ ಎಂದರು. ವೇದಿಕೆಯಲ್ಲಿ ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್,ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ, ,ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ,ಕಾಪು ವ್ರತ್ತನಿರೀಕ್ಷಕ ಪೂವಯ್ಯ, ಕಾಲೇಜು ಪ್ರಾಂಶುಪಾಲ ಸ್ಟೀಫನ್ ಕ್ವಾರ್ಡಸ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *