
ಶಿರ್ವ : ವಿಪರೀತ ಕುಡಿತದ ಚಟ ಹೊಂದಿದ್ದ ಯುವಕ ಕಳತ್ತೂರು ಶಾಂತಿಗುಡ್ಡೆ ರೈಸ್ ಮಿಲ್ ಬಳಿಯ ದರ್ಕಾಸ್ ನಿವಾಸಿ ಸಚಿನ್ ಮೂಲ್ಯ ತನ್ನ ಮನೆ ಸಮೀಪದ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 8 ವರ್ಷದ ಹಿಂದೆ ಈತನ ಅಣ್ಣನೂ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಸಂಜೆ 4-30ರ ವೇಳೆಗೆ ಬಾವಿಗೆ ಹಾರಿದ್ದಾನೆ. ಆಳವಾದ ಬಾವಿಯಲ್ಲಿ ಸುಮಾರು 20 ಅಡಿ ನೀರಿದ್ದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ದೆಂದೂರಿನ ಅಶೋಕ್ ಶೆಟ್ಟಿ ಮತ್ತು ತಂಡ ಮೃತ ದೇಹವನ್ನು ರಾತ್ರಿ ಬಾವಿಯಿಂದ ಮೇಲಕ್ಕೆತ್ತಲು ಸಹಕರಿಸಿದ್ದಾರೆ

